ವಾಗ್ದೇವಿ ಟ್ರಸ್ಟ್ನಿಂದ ಶಾಲಾ ಮಕ್ಕಳಿಗೆ ನೋಟ್ ಬುಕ್ ಹಾಗೂ ಟಿಫಿನ್ ಬಾಕ್ಸ್ ವಿತರಣೆ

ಮೈಸೂರು : ನಗರದ ವಾರ್ಡ್ ನಂ 1 ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹಾಗೂ ಪವಾಡ ಅರಳೀಕಟ್ಟೆ ಸನ್ನಿಧಾನ ಸಂಸ್ಥಾಪಕರಾದ ಪಿ.ಬಿ.ಜಗದೀಶ್ ಅವರ ಹುಟ್ಟುಹಬ್ಬದ ಅಂಗವಾಗಿ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ಮತ್ತು  ಟಿಫನ್ ಬಾಕ್ಸ್ ವಿತರಣೆ ಮಾಡಲಾಯಿತು.
ಹೆಬ್ಬಾಳು 3ನೇ ಹಂತದ ಸುಬ್ರಹ್ಮಣ್ಯನಗರದಲ್ಲಿನ ಪವಾಡ ಅರಳೀಕಟ್ಟೆ ಸುಬ್ರಹ್ಮಣ್ಯಸ್ವಾಮಿ ಸನ್ನಿಧಿಯ ಆವರಣದಲ್ಲಿ ವಾಗ್ದೇವಿ ಟ್ರಸ್ಟ್ ವತಿಯಿಂದ ನಡೆದ ಊಈ ಸಮಾರಂಭದಲ್ಲಿ ಪಿ.ಬಿ.ಜಗದೀಶ್‌ ಅವರು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್‌ ಬುಕ್‌ ಮತ್ತು ಟಿಫಿನ್‌ ಬಾಕ್ಸ್‌ ವಿತರಣೆ ಮಾಡಿದರು.
ನೋಟ್ ಬುಕ್ ವಿತರಣೆಗೂ ಮುನ್ನ ಜಗದೀಶ್‌ ಅವರು ಪವಾಡ ಅರಳೀಕಟ್ಟೆಯಲ್ಲಿನ ಸುಬ್ರಹ್ಮಣ್ಯಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ನೋಟ್ ಬುಕ್ ಮತ್ತು ಟಿಫನ್ ಬಾಕ್ಸ್ ಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಹಾಜರಿದ್ದ ಶಾಸಕ ಹರೀಶ್‌ ಗೌಡ ಅವರು ಮಾತನಾಡಿ, ಕಳೆದ ಸುಮಾರು 20 ವರ್ಷಗಳಿಂದ ವಾಗ್ದೇವಿ ಟ್ರಸ್ಟ್ ಮೂಲಕ ಪಿ.ಬಿ.ಜಗದೀಶ್ ಅವರು ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದು ಅದರಲ್ಲಿ ಬಡ ಮಕ್ಕಳಿಗೆ ಉತ್ಕೃಷ್ಟವಾದ ಗುಣಮಟ್ಟದ ನೋಟ್ ಬುಕ್ ಮತ್ತು ಟಿಫಿನ್‌ ಬಾಕ್ಸ್‌ ವಿತರಣೆ ಮಾಡುತ್ತಿದ್ದಾರೆ. ಇಂತಹ ಸೇವೆ ಶ್ಲಾಘನೀಯ ಎಂದರು.
ಇದೇ ವೇಳೆ ಹರೀಶ್‌ ಗೌಡ ಅವರು ಕೇಕ್‌ ಕತ್ತರಿಸಿ ವಾಗ್ದೇವಿ ಟ್ರಸ್ಟ್ ಅಧ್ಯಕ್ಷ ಪಿ.ಬಿ.ಜಗದೀಶ್ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದರು.
ವಾಗ್ದೇವಿ ಟ್ರಸ್ಟ್ ಕಾರ್ಯಾಧ್ಯಕ್ಷರಾದ ವೆಂಕಟೇಶ್, ಮಾಲಾ ಜಗದೀಶ್, ವಾಗ್ದೇವಿ ಟ್ರಸ್ಟ್
ಸದಸ್ಯರುಗಳು ಉಪಸ್ಥಿತರಿದ್ದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು