ಪಾಂಡವಪುರ : ಬಿಜೆಪಿ ಸರ್ಕಾರದಲ್ಲಿ ದಲಿತರು ಸಂತೋಷವಾಗಿದ್ದು, ಈ ಬಾರಿ ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ದಲಿತರು ಬಿಜೆಪಿ ಬೆಂಬಲಿಸಲಿದ್ದಾರೆ ಎಂದು ವಕೀಲ ಹಾಗೂ ಬಿಜೆಪಿ ಎಸ್‍ಸಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಎನ್.ಎಂ.ಸುರೇಶ್ ಹೇಳಿದರು. ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ದಲಿತರು ಬಿಜೆಪಿಯನ್ನು ಒಪ್ಪಿಕೊಂಡು ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ನಿರೀಕ್ಷೆ ಮಾಡುತ್ತಿದ್ದಾರೆ. ದಲಿತರ ಏಳಿಗೆ ಬಿಜೆಪಿಯಿಂದ ಹೊರತು ಕಾಂಗ್ರೆಸ್ ನಿಂದ ಸಾಧ್ಯವಿಲ್ಲ. ಕಾಂಗ್ರೆಸ್ 70 ವರ್ಷದಿಂದ ದಲಿತರನ್ನು ನಿರ್ನಾಮ ಮಾಡಿಕೊಂಡು ಬರುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠೆಯಿಂದ ದುಡಿದ ಹಲವು ಮಾಯಕರನ್ನು ಕಡೆಗಣಿಸಿದೆ. ದಲಿತರು ಮುಖ್ಯಮಂತ್ರಿ ಆಗುವ ಅವಕಾಶ ಇದ್ದರೂ ತಪ್ಪಿಸಿದೆ ಎಂದು ಕಿಡಿ ಕಾರಿದರು. ಆದರೇ, ಬಿಜೆಪಿ ದಲಿತರಿಗೆ ಸಮಾನವಾದ ಅವಕಾಶವನ್ನು ಕೊಟ್ಟು ರಾಷ್ಟ್ರದ ಐಕ್ಯತೆ, ಸಮಾನತೆಗೆ. ಸಮಗ್ರತೆ ಮೂಲಕ ಸುಭದ್ರ ಸರ್ಕಾರ ನಡೆಸುತ್ತಿದೆ ಎಂದು ಹೇಳಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಡಬ ಪುಟ್ಟರಾಜು ಮಾತನಾಡಿ, ಬಿಜೆಪಿ ಸರ್ಕಾರ ದಲಿತರ ಸರ್ವಾಂಗೀಣ ಅಭಿವೃದ್ಧಿಗೆ ಮುಂದಾಗಿದೆ. ದಲಿತರ ಮಕ್ಕಳು ವಿದೇಶದಲ್ಲಿ ವ್ಯಾಸಂಗ ಮಾಡಲು 10 ಲಕ್ಷ ರೂ. ಅನುದಾನ ನೀಡುತ್ತಿದೆ. ಎಸ್‍ಸಿ, ಎಸ್‍ಟಿ ಮೀಸಲಾತಿ ಪ್ರಮಾನ ಹೆಚ್ಚು ಮಾಡಿದ್ದಲ್ಲದೇ ಒಳ ಮೀಸಲಾತಿಯನ್ನೂ ನೀಡಿದೆ. ಆದರೇ, ಈ ಹಿಂದೆ ಇದ್ದ ಕಾಂಗ್ರೆಸ್ ಸರ್ಕಾರ ದಲಿತರನ್ನು ಕಡೆಗಣಿಸಿದೆ ಈ ಬಾರಿ ಕ್ಷೇತ್ರದ ದಲಿತ ಬಂಧುಗಳು ಡಾ.ಎನ್.ಎಸ್.ಇಂದ್ರೇಶ್ ಅವರಿಗೆ ಮತ ಚಲಾಯಿಸಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಲು ಅವಕಾಶ ಕಲ್ಪಿಸಬೇಕು ಎಂದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಹಿರಿಯ ಮುಖಂಡ ಹೆಚ್.ಎನ್.ಮಂಜುನಾಥ್, ತಾಲೂಕು ಎಸ್‍ಸಿ ಮೋರ್ಚಾ ಅಧ್ಯಕ್ಷ ಎಸ್.ಮಲ್ಲೇಶ್, ಎಸ್‍ಟಿ ಮೋರ್ಚಾ ಅಧ್ಯಕ್ಷ ಕುಮಾರ ನಾಯಕ, ಮುಖಂಡರಾದ ವೇಣು, ಶ್ರೀನಿವಾಸ ನಾಯಕ, ವೇಣು, ಅರಳಕುಪ್ಪೆ ಕುಮಾರ್ ಮುಂತಾದವರು ಇದ್ದರು.
0 ಕಾಮೆಂಟ್‌ಗಳು