ಕನ್ನಡಿಗ ಹೆಣ್ಣುಮಕ್ಕಳು ಕಷ್ಟ ಜೀವಿಗಳು: ಪ್ರಿಯಾಂಕ ಗಾಂಧಿ

ಶಾರುಕ್ ಖಾನ್, ಹನೂರು
ಹನೂರು : ಕರ್ನಾಟಕದಲ್ಲಿ ಕನ್ನಡಿಗ ಹೆಣ್ಣುಮಕ್ಕಳು ವರ್ಷದ 365 ದಿನವೂ ದುಡಿಮೆಯಲ್ಲಿದ್ದು, ಅತ್ಯಂತ ಕಷ್ಟ ಜೀವಿಗಳು ಇದಕ್ಕಾಗಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮಾಸಿಕ 2 ಸಾವಿರ ರೂ.ನಮ್ಮ ಹೆಣ್ಣು ಮಕ್ಕಳ ಖಾತೆಗೆ ಹಾಕಲಾಗುತ್ತದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಹೇಳಿದರು. 
ಹನೂರು ಪಟ್ಟಣದ ಆರ್.ಎಸ್. ದೊಡ್ಡಿಯ ಗೌರಿಶಂಕರ ಕಲ್ಯಾಣ ಮಂಟಪದ ಆವರಣದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪ್ರಚಾರಸಭೆಯಲ್ಲಿ ಅವರು ಮಾತನಾಡಿ, ರಾಜ್ಯದಲ್ಲಿ ಹೆಣ್ಣುಮಕ್ಕಳು ಎಷ್ಟೋಂದು ಕಷ್ಟ ಪಡುತ್ತಿದ್ದಾರೆ ಎನ್ನುವುದು ನನಗೆ ಗೊತ್ತು. ಕೌಟುಂಬಿಕ ನಿರ್ವಹಣೆಯಲ್ಲಿ ಗಂಡಸಿಗರಿಗಿಂತ ಹೆಣ್ಣು ಮಕ್ಕಳ ದುಡಿಮೆ ಹೆಚ್ಚಾಗಿದೆ. ಉತ್ತರ ಪ್ರದೇಶದಲ್ಲಿಯೂ ಹೆಣ್ಣು ಮಕ್ಕಳ ಕಷ್ಟಗಳನ್ನು ನೋಡಿ ಅವರಿಗೆ ಹೊಸ ಹೊಸ ಯೋಜನೆ ತಂದಿದ್ದೆ. ಆದರೆ ಅಲ್ಲಿರುವ ಬಿಜೆಪಿ ಸರ್ಕಾರ ನಾನು ತಂದಿದ್ದ ಜನಪ್ರಿಯ ಯೋಜನೆಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ. ದೇಶವನ್ನು ಕಟ್ಟುವಲ್ಲಿ ಹೆಣ್ಣು ಮಕ್ಕಳ ಪಾತ್ರ ದೊಡ್ಡದು. ಬಿಜೆಪಿ ರಾಜ್ಯದಲ್ಲಿ ಕಳೆದ ನಾಲ್ಕು ವರ್ಷದಿಂದ ಜನರನ್ನು ತುಳಿಯುತ್ತಿದೆ. 
ಆದ್ದರಿಂದ ನಿಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಎಂದರು.
ರಾಜ್ಯದಲ್ಲಿ ಎಲ್ಲಿಯೂ ಉತ್ತಮ ಗುಣಮಟ್ಟದ ರಸ್ತೆಗಳಿಲ್ಲ, ಆಸ್ಪತ್ರೆಗಳಿಲ್ಲ, ಆದರೆ ಎಲ್ಲಾ ಕಾಮಗಾರಿಗಳಲ್ಲೂ ಶೇ. 40 ಕಮಿಷನ್ ಪಡೆಯುತ್ತಾ ಬಡಜನರು ಹಗಲು-ರಾತ್ರಿ ದುಡಿದ ಹಣವನ್ನುಲೂಟಿ ಮಾಡುತ್ತಿದೆ ಎಂದು ಟೀಕಿಸಿದರು.
ಬಿಜೆಪಿ ಅಧಿಕಾರಕ್ಕೆ ಬಂದು ಜನಸೇವೆ ಮಾಡುತ್ತದೆ ಎಂದು ನಂಬಿ ನೀವೆಲ್ಲ ನಿಮ್ಮ ಮತವನ್ನು ದಾನ ಮಾಡಿದ್ದೀರಾ ಆದರೆ ಅವರೆಲ್ಲ ಕೋಟಿ ಕೋಟಿ ಕೊಳ್ಳೆ ಹೊಡಿತಾ ಇದ್ದಾರೆ. ಪ್ರಧಾನಿ ಸ್ನೇಹಿತ ಅದಾನಿ ಈ ದೇಶವನ್ನೇ ಕೊಳ್ಳೆ ಹೊಡೆಯುತ್ತಿದ್ದು, ಆತನ ಆದಾಯ ಒಂದು ದಿನದಲ್ಲಿ 1 ಲಕ್ಷ ಕೋಟಿ ಗಳಿಸುತ್ತಿದ್ದಾನೆ. ಆದರೇ ಬಡವರು, ರೈತರು ದಿನಕ್ಕೆ 125 ರೂಪಾಯಿ ಸಂಪಾದನೆ ಮಾಡುವುದಕ್ಕೂ ಕಷ್ಟ ಪಡಬೇಕಿದೆ ಎಂದು ನೊಂದು ನುಡಿದರು.
ಈ ಚುನಾವಣೆ ದೇಶದ ಯುವಕರ ಭವಿಷ್ಯ ತೀರ್ಮಾನ ಮಾಡುತ್ತದೆ.  ಹಾಗಾಗಿ ನಿಮ್ಮ ಮನೆ ಕಾಯುವ ನಿಮ್ಮ ಹಿತ ಕಾಯುವ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಮನವಿ ಮಾಡಿದರು.
 ಈ ಸಂದರ್ಭದಲ್ಲಿ ರಾಜ್ಯ ಚುನಾವಣೆ ಉಸ್ತುವಾರಿ ರಣದೀಪ್ ಸುರ್ಜೆವಾಲ, ಶಾಸಕ ಆರ್.ನರೇಂದ್ರ, ರಾಜ್ಯ ಮಹಿಳಾ ಅಧ್ಯಕ್ಷೆ ಪುಷ್ಪಾ  ಅಮರಾನಾಥ್ ಮತ್ತಿತರರು ಉಪಸ್ಥಿತರಿದ್ದರು


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು