ಕೊಂಗರಳ್ಳಿ ಗ್ರಾಪಂ ಕಛೇರಿಗೆ ಶಾಸಕ ಆರ್.ನರೇಂದ್ರ, ಉಪ ವಿಭಾಗಾಧಿಕಾರಿ ಗೀತಾ ಹುಡೇದ ಭೇಟಿ

ಶಾರುಕ್ ಖಾನ್, ಹನೂರು 
ಹನೂರು: ತಾಲ್ಲೂಕಿನ ಕೊಂಗರಹಳ್ಳಿ ಗ್ರಾಪಂ ಕಛೇರಿಗೆ ಶಾಸಕ ಆರ್.ನರೇಂದ್ರ ಹಾಗೂ ಉಪ ವಿಭಾಗಾಧಿಕಾರಿ ಗೀತಾ ಹುಡೇದ ಅವರು ಭೇಟಿ ನೀಡಿ ಕೆಶಿಫ್ ರಸ್ತೆ ಅಗಲೀಕರಣ ಕಾಮಗಾರಿಗೆ ಸಂಬಂಧಿಸಿದಂತೆ ಮುಖ್ಯ ರಸ್ತೆಯಲ್ಲಿ ತೆರುವಾದ ಮನೆಗಳು, ಅಂಗಡಿಗಳ ಪರಿಹಾರಕ್ಕೆ ಫಲಾನುಭವಿಗಳ ಮೂಲ ದಾಖಲಾತಿಗಳ ಪರಿಶೀಲನೆ ನಡೆಸಿದರು.
ಇದೇ ವೇಳೆ ಮಾತನಾಡಿದ ಶಾಸಕ ನರೇಂದ್ರ ಅವರು, ಕೆಶಿಫ್ ರಸ್ತೆ ಅಗಲೀಕರಣ ಸಂದರ್ಭದಲ್ಲಿ ತೆರವಾದಂತಹ ಮನೆಗಳು, ಅಂಗಡಿಗಳಿಗೆ ಈಗಾಗಲೇ ಪರಿಹಾರವನ್ನು ನೀಡಲಾಗಿದೆ. ಸುಮಾರು 27 ಜನರ  ದಾಖಲಾತಿಗಳು ಸರಿ ಇಲ್ಲದ ಕಾರಣ ರಿಜೆಕ್ಟ್ ಮಾಡಲಾಗಿತ್ತು. 
ಇದಕ್ಕೆ ಸಂಬಂಧಿಸಿದಂತೆ ಲಭ್ಯವಿರುವ ದಾಖಲಾತಿಗಳನ್ನು ಮತ್ತೊಮ್ಮೆ  ಪರಿಶೀಲಿಸಿ ಪರಿಹಾರ ಕೊಡಿಸಲು ಪ್ರಯತ್ನ ನಡೆಸಿದ್ದೇವೆ ಎಂದರು.
ಪಿಡಿಒ ಮಹೇಂದ್ರ, ಕೆಶಿಫ್ ರಸ್ತೆ ಅಧಿಕಾರಿಗಳು, ಗೌಡ್ರು ಕುಮಾರ್, ಗ್ರಾಪಂ ಸದಸ್ಯ ಗೋಪಾಲ್, ಮಹೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು