ಸರಗೂರು : ನಾಗರಹೊಳೆಯ ಬಳ್ಳೆ ಅರಣ್ಯ ಪ್ರದೇಶದಲ್ಲಿ ಸೌದೆ ಆಯಲು ಹೋಗಿದ್ದ 18 ವರ್ಷದ ಯುವಕನ್ನು ಹುಲಿಯೊಂದು ಕೊಂದು ಹಾಕಿರುವ ಘಟನೆ ಇಂದು ನಡೆದಿರುವ ಬಗ್ಗೆ ವರದಿಯಾಗಿದೆ. ಸುಮಾರು 18 ವರ್ಷದ ಯುವಕ ಮಂಜು ಹುಲಿಯ ದಾಳಿಗೆ ಸಿಲುಕಿ ಬಲಿಯಾಗಿದ್ದಾನೆ. ಸೌದೆ ತರಲು ಕಾಡಿಗೆ ಹೋಗಿದ್ದಾಗ ಹುಲಿ ಮಂಜುವನ್ನು ಕೊಂದು ಹಾಕಿದೆ. ಈ ಬಗ್ಗೆ ಅಂತರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ಮೂರು ದಿನದಲ್ಲಿ ಕಾಡು ಪ್ರಾಣಿಗಳಿಗೆ ಇದು ಮೂರನೇ ಬಲಿಯಾಗಿದೆ. ಟಿ.ನರಸೀಪುರ ತಾಲ್ಲೂಕಿನಲ್ಲಿ 60 ವರ್ಷದ ಮಹಿಳೆ, 11 ವರ್ಷದ ಬಾಲಕನ್ನು ಚಿರತೆ ಕೊಂದು ಹಾಕಿದ್ದ ಘಟನೆ ಮಾಡುವ ಮುನ್ನ ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಯುವಕನೊಬ್ಬ ಹುಲಿಗೆ ಬಲಿಯಾಗಿರುವುದು ಕಾಡಂಚಿನ ಗ್ರಾಮಗಳ ಜನರನ್ನು ತಲ್ಲಣಗೊಳಿಸಿದೆ.
0 ಕಾಮೆಂಟ್‌ಗಳು