ಕಣ್ಣೂರು ಗ್ರಾಮ ಪಂಚಾಯ್ತಿ ನೂತನ ಅಧ್ಯಕ್ಷೆ ಶಬಾನ ಖಾನಂ ಅವರನ್ನು ಸನ್ಮಾನಿಸಿದ ಮಾಜಿ ಶಾಸಕಿ ಪರಿಮಳ ನಾಗಪ್ಪ

ಶಾರುಕ್ ಖಾನ್, ಹನೂರು
ಹನೂರು : ತಾಲ್ಲೂಕಿನ ಕಣ್ಣೂರು ಗ್ರಾಮ ಪಂಚಾಯ್ತಿ ನೂತನ ಅಧ್ಯಕ್ಷೆಯಾಗಿದ್ದ ಶಬಾನ ಖಾನಂ ಅವರನ್ನು ಮಾಜಿ ಶಾಸಕಿ ಪರಿಮಳ ನಾಗಪ್ಪ ಸನ್ಮಾನಿಸಿದರು. 
ಹನೂರು ತಾಲ್ಲೂಕು ಕಾಮಗೆರೆಯ ಪರಿಮಳ ನಾಗಪ್ಪ ನಿವಾಸದಲ್ಲಿ ಶಬಾನ ಖಾನಂ ಅವರನ್ನು ಸನ್ಮಾನಿಸಿ ಮಾತನಾಡಿದ ಪರಿಮಳ ನಾಗಪ್ಪ, ಕಣ್ಣೂರು ಗ್ರಾಮ ಪಂಚಾಯಿತಿಯಲ್ಲಿ ಮೊದಲ ಬಾರಿಗೆ ಅಲ್ಪಸಂಖ್ಯಾತರ ಮುಸ್ಲಿಂ ಮಹಿಳೆಗೆ ಅಧ್ಯಕ್ಷೆ ಸ್ಥಾನದ ಅವಕಾಶ ಸಿಕ್ಕಿರುವುದು ಸಂತಸ ತಂದಿದೆ ಎಂದರು.
ನಮ್ಮಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರು ಎಂಬ ಯಾವುದೇ ಭೇದ ಭಾವನೆ ಇಲ್ಲ. ನಾವೆಲ್ಲರೂ ಸಹೋದರರಂತೆ ಇದ್ದೇವೆ. ದಿವಂಗತ ನಾಗಪ್ಪ ಅವರ ಕಾಲದಿಂದಲೂ ನಾವುಗಳು ವಿಶ್ವಾಸದಿಂದ ಇದ್ದವರು. ನೂತನ ಅಧ್ಯಕ್ಷರು ಎಲ್ಲರ ಪ್ರೀತಿ ವಿಶ್ವಾಸಗಳಿಸಿ ಪಂಚಾಯ್ತಿ ಅಭಿವೃದ್ಧಿ ಕೆಲಸಗಳನ್ನು ಮಾಡಲಿ ಎಂದು ಶುಭ ಕೋರಿದರು.
ಈ ಸಂದರ್ಭದಲ್ಲಿ ಬಿಜೆಪಿ ಯುವ ನಾಯಕ ಡಾ.ಪ್ರೀತನ್ ನಾಗಪ್ಪ, ಕಣ್ಣೂರು ಗ್ರಾಮದ ಮುಖಂಡರಾದ ರಾಜಪ್ಪ, ಬಸವರಾಜಪ್ಪ, ಮಹೇಂದ್ರಗುರು, ಮಣಗಳ್ಳಿ ಕೃಷ್ಣಕುಮಾರ್, ಮಂಗಲ ಗ್ರಾಮ ಪಂಚಾಯಿತಿ ಸದಸ್ಯ ಅನಿಲ್ ಕುಮಾರ್, ಹಾಗೂ ಮಹದೇವಪ್ಪ, ದೇವರಾಜಪ್ಪ, ಸ್ವಾಮಿ, ಕುಮಾರ್, ನಾಗೇಶ್, ನಿಂಗನಾಯ್ಕ, ರಮೇಶ್, ಮಲ್ಲೇಶ್, ಅಫ್ರೊಜ್ ಖಾನ್ ಹಾಗೂ ಇನ್ನಿತರರು ಇದ್ದರು.





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು