ಕುಡುಗೋಲಿನಿಂದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ, ತಾಲ್ಲೂಕು ಕಚೇರಿ ಆವರಣದಲ್ಲಿ ರಕ್ತದೋಕುಳಿ
ಜನವರಿ 24, 2023
ಟಿ.ಬಿ.ಸಂತೋಷ, ಮದ್ದೂರು ಮದ್ದೂರು : ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನ ಮೇಲೆ ಕುಡುಗೋಲಿನಿಂದ ಮಾರಾಣಾಂತಿಕವಾಗಿ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿರುವ ಘಟನೆ ಮದ್ದೂರು ತಾಲ್ಲೂಕು ಕಚೇರಿ ಆವರಣದಲ್ಲಿ ನಡೆದಿದೆ. ತಾಲ್ಲೂಕಿನ ಮರಳಿಗ ಗ್ರಾಮದ ಚಿನ್ನರಾಜ್ ಎಂಬಾತನ ಮೇಲೆ ಅದೇ ಗ್ರಾಮದ ನಂದನ್ ಎಂಬುವವನ್ನು ಕುಡುಗೊಲಿನಿಂದ ಭೀಕರವಾಗಿ ಹಲ್ಲೆಮಾಡಿದ್ದಾನೆ. ಚಿನ್ನರಾಜುವಿನ ಕಣ್ಣಿಗೆ ಖಾರದ ಪುಡಿ ಎರಚಿದ ನಂದನ್, ಸುಮಾರು 40ಕ್ಕೂ ಹೆಚ್ಚು ಬಾರಿ ಕುಡುಗೋಲಿನಿಂದ ಮನಬಂದಂತೆ ಹಲ್ಲೆ ಮಾಡಿದ್ದು, ಚಿನ್ನರಾಜು ಸ್ಥಿತಿ ಗಂಭೀರವಾಗಿದೆ. ಜಮೀನು ವಿವಾದ ಸಂಬಂಧ ಇಬ್ಬರೂ ತಾಲ್ಲೂಕು ಕಛೇರಿಗೆ ಬಂದಿದ್ದರು. ಕೋರ್ಟ್ ಚಿನ್ನರಾಜ್ ಪರ ತೀರ್ಪು ನೀಡುತ್ತಿದ್ದಂತೆ ಚಿನ್ನರಾಜ್ ಹಾಗೂ ನಂದನ್ ನಡುವೆ ಜಗಳ ನಡೆದು ನಂದನ್ ಕುಡುಗೊಲಿನಿಂದ ಚಿನ್ನರಾಜ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಸ್ಥಳದಲ್ಲಿದ್ದ ಸಾರ್ವಜನಿಕರು ಜಗಳ ಬಿಡಿಸಲು ಪ್ರಯತ್ನಿಸಿದರು ಸಾಧ್ಯವಾಗದ ಹಿನ್ನೆಲೆಯಲ್ಲಿ ನಂದನ್ ಮೇಲೆ ಕಲ್ಲುತೂರಿ ಚಿನ್ನರಾಜ್‍ನನ್ನು ರಕ್ಷಿಸಿದ್ದಾರೆ.
ಕಲ್ಲು ತೂರಿದ್ದರಿಂದ ನಂದನ್ ಕೂಡ ಗಾಯಗೊಂಡಿದ್ದು ಇಬ್ಬರನ್ನು ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಮದ್ದೂರು ಪೊಲೀಸರು ಭೇಟಿ ನಿಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
0 ಕಾಮೆಂಟ್‌ಗಳು