ತಿ.ನರಸೀಪುರ ಸಮೀಪ ಚಿದರಳ್ಳಿ ಜಮೀನಿನಲ್ಲಿ ಚಿರತೆ ಸೆರೆ

ನಾಗೇಂದ್ರ ಕುಮಾರ್, ತಿ.ನರಸೀಪುರ
ತಿ.ನರಸೀಪುರ : ತಾಲ್ಲೂಕಿನಲ್ಲಿ ಎರಡು ದಿನಗಳ ಅಂತರದಲ್ಲಿ ಇಬ್ಬರು ಚಿರತೆಗೆ ಬಲಿಯಾಗಿರುವ ಬೆನ್ನಲ್ಲೆ ಚಿದರಳ್ಳಿ ಗ್ರಾಮದಲ್ಲಿ ಚಿರತೆಯೊಂದು ಅರಣ್ಯ ಇಲಾಖೆ ಬೋನಿನಲ್ಲಿ ಸೆರೆಯಾಗಿದೆ.
ಗ್ರಾಮದ ಸ್ವಾಮಿ ಎಂಬುವರ ಜಮೀನಿನಲ್ಲಿ ಮೂರು ಚಿರತೆ ಮರಿಗಳು ಕಾಣಿಸಿಕೊಂಡ ತಕ್ಷಣ ಎಚ್ಚೆತ್ತುಕೊಂಡ ಅರಣ್ಯ ಇಲಾಖೆಯವರು ಇಲ್ಲಿ ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸಿದ್ದರು.
ಇದರ ಫಲವಾಗಿ ಚಿರತೆ ಬೋನಿಗೆ ಬಿದ್ದಿದ್ದು,  ಸೆರೆ ಸಿಕ್ಕಿರುವ ಚಿರತೆ ನಾಲ್ಕು ಜನರನ್ನು ಬಲಿ ತೆಗೆದುಕೊಂಡ ನರಭಕ್ಷಕ ಚಿರತೆಯೋ ಅಥವಾ ಬೇರೆಯದೋ  ಎಂಬ ವಿಷಯ ಅರಣ್ಯಾಧಿಕಾರಿಗಳು ಸ್ಪಷ್ಟಪಡಿಸಬೇಕಿದೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು