ಹನೂರು ಕ್ಷೇತ್ರದಲ್ಲಿ ಪ್ರಚಾರ ಪ್ರಿಯ ರಾಜಕಾರಣಿಗಳೆ ಹೆಚ್ಚಾಗಿದ್ದಾರೆ : ಜಾವೇದ್ ಅಹ್ಮದ್
ಜನವರಿ 14, 2023
ವರದಿ ಶಾರೂಕ್ ಖಾನ್ ಹನೂರು ಹನೂರು: ರಾಜ್ಯಕ್ಕೆ ಪ್ರಿಯಾಂಕ ಗಾಂಧಿ ಆಗಮಿಸುವ ಹಿನ್ನಲೆಯಲ್ಲಿ ಕ್ಷೇತ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಕಾರ್ಯಕರ್ತರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಬಂಡಳ್ಳಿ ತಾಪಂ ಮಾಜಿ ಸದಸ್ಯ ಜಾವೇದ್ ಅಹ್ಮದ್ ಕೋರಿದರು. ಪಟ್ಟಣದ ಕಾಂಗ್ರೆಸ್ ಕಛೇರಿಯಲ್ಲಿ ನಾ ನಾಯಕಿ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷವು ಮಹಿಳೆಯರಿಗೆ ಹೆಚ್ವು ಅಧಿಕಾರ ನೀಡುವುದರಲ್ಲಿ ಮೊದಲನೆ ಸ್ಥಾನ ಪಡೆದಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮಹಿಳೆಯರಿಗಾಗಿ ಹಲವಾರು ಯೋಜನೆಯನ್ನು ಜಾರಿಗೆ ತಂದಿದೆ. ಹೀಗಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದರು. ಕ್ಷೇತ್ರದಲ್ಲಿ ರಾಜಕಾರಣಿಗಳು ತೋರಿಕೆಗಾಗಿ, ಪ್ರಚಾರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಗ್ರಾಮದಲ್ಲಿ ಗ್ರಾಮಸ್ಥರು ಮತ್ತು ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ನೀಡಿದ ಹಣಕಾಸು ನೆರವಿನಿಂದ ದೇವಾಲಯ ಕಟ್ಟಲಾಗಿದೆ. ಕಾಂಗ್ರೆಸ್ ನಾಯಕರು ಪ್ರಚಾರಕ್ಕಾಗಿ ಅಭಿವೃದ್ಧಿ ಮಾಡುವುದಿಲ್ಲ. ಕೇವಲ ನೀರಿನ ಪಂಪ್ ಹಾಕಿಸಿ ದೇವಾಲಯವನ್ನೆ ಕಟ್ಟಿಸಿದ್ದೆವೆ ಎಂದು ಹೇಳುವವರೂ ನಮ್ಮ ಕ್ಷೇತ್ರದಲ್ಲಿದ್ದಾರೆ ಎಂದರು.
0 ಕಾಮೆಂಟ್‌ಗಳು