ಶ್ರೀ ಸಿದ್ದೇಶ್ವರ ಸ್ವಾಮೀಜಿ ನಿಧನಕ್ಕೆ ಪ್ರಜ್ಞಾವಂತ ನಾಗರೀಕ ವೇದಿಕೆ ಹಾಗೂ ಭಕ್ತರಿಂದ ಸಂತಾಪ
ಜನವರಿ 03, 2023
ಮೈಸೂರು : ಪ್ರಜ್ಞಾವಂತ ನಾಗರಿಕ ವೇದಿಕೆ ಹಾಗೂ ಶ್ರೀ ಸಿದ್ದೇಶ್ವರ ಸ್ವಾಮೀಜಿ ಭಕ್ತಾ ವೃಂದದಿಂದ ನಗರದ ನ್ಯಾಯಾಲಯದ ಮುಂಭಾಗ ಅಪರೂಪದ ಸಂತ, ವಿಜಯಪುರದ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ನಿಧನಕ್ಕೆ ದೀಪ ಬೆಳಗಿಸಿ ಸಂತಾಪ ಸೂಚಿಸಲಾಯಿತು. ನಗರ ಪಾಲಿಕೆ ಸದಸ್ಯ ಮಾ.ವಿ. ರಾಮ್‍ಪ್ರಸಾದ್, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ, ಇಳೈಆಳ್ವಾರ್ ಸ್ವಾಮೀಜಿ, ನಗರಪಾಲಿಕೆ ನಾಮ ನಿರ್ದೇಶಕ ಜಗದೀಶ್, ನಗರ ಬಿಜೆಪಿ ಹಿಂದುಳಿದ ವರ್ಗ ಮೋರ್ಚಾದ ಅಧ್ಯಕ್ಷ ಜೋಗಿ ಮಂಜು, ಬಿಜೆಪಿ ಯುವ ಮೋರ್ಚಾ ನಗರ ಪ್ರಧಾನ ಕಾರ್ಯದರ್ಶಿ ಸಂತೋμï, ಚಾಮುಂಡೇಶ್ವರಿ ಬಿಜೆಪಿ ಅಧ್ಯಕ್ಷ ಗೆಜ್ಜಗಲ್ಲಿ ಮಹೇಶ್, ಕೆ.ಆರ್. ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಸಂತೋμï ಕುಮಾರ್ ಪಾಲ್, ಪ್ರಜ್ಞಾವಂತ ನಾಗರಿಕ ವೇದಿಕೆ ಅಧ್ಯಕ್ಷ ಕಡಕೋಳ ಜಗದೀಶ್, ಶಿವಸ್ವಾಮಿ, ಮಹದೇವ ಪ್ರಸಾದ್, ಜಿ.ಎಂ. ಪಂಚಾಕ್ಷರಿ, ಲಿಂಗರಾಜು, ಎಸ್.ಎನ್. ರಾಜೇಶ್, ಶಿವಕುಮಾರ್, ಜಿ.ರಾಘವೇಂದ್ರ, ನವೀನ್ ಕೆಂಪಿ, ಹಾಗೂ ಇನ್ನಿತರರು ಸಂತಾಪ ಸಭೆಯಲ್ಲಿ ಭಾಗಿಯಾಗಿದ್ದರು.
0 ಕಾಮೆಂಟ್‌ಗಳು