ಕಾರು ಡಿಕ್ಕಿ ಹೊಡೆಸಿ ದಂಪತಿ ಕೊಲೆಗೆ ಯತ್ನ: ಪತ್ನಿ ಸಾವು, ಪತಿ ಗಂಭೀರ

ಮಂಡ್ಯ: ಜಮೀನು ವಿವಾದ ಸಂಬಂಧ ದುಷ್ಕರ್ಮಿಗಳು ದಂಪತಿಗೆ ಕಾರಿನಿಂದ ಗುದ್ದಿ ಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯ ನಾಗಮಂಗಲ ತಾಲೂಕಿನ ಗಾಣಸಂದ್ರ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಜಯಲಕ್ಷ್ಮಿ (45) ಎಂಬವರು ಸಾವನ್ನಪ್ಪಿದ್ದು, ಅವರ ಪತಿ ರಾಮಕೃಷ್ಣಯ್ಯ ಗಂಭೀರವಾಗಿ ಗಾಯಗೊಂಡಿದ್ದಾರೆ. ಸೋಮವಾರ ಟ್ರ್ಯಾಕ್ಟರ್​​ನಲ್ಲಿ ಉಳುಮೆ ಮಾಡಿಸುತ್ತಿದ್ದಾಗ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಕೃತ್ತ ಎಸಗಿದ್ದಾರೆ. ಘಟನೆ ಸಂಬಂಧ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಾದ ಗೌಡಯ್ಯ, ಅನಿಲ್, ಗೌಡಯ್ಯನ ಪತ್ನಿ ಖಾಕಿ ವಶಕ್ಕೆ ಪಡೆದಿದ್ದಾರೆ.
 ಗೌಡಯ್ಯ ಮತ್ತು ರಾಮಕೃಷ್ಣಯ್ಯ ಕುಟುಂಬದ ನಡುವೆ ಜಮೀನು ವಿವಾದವಿತ್ತು. ರಾಮಕೃಷ್ಣಯ್ಯ ಮತ್ತು ಅವರ ಪತ್ನಿ ಜಯಲಕ್ಷ್ಮಿ  ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡಿಸುತ್ತಿದ್ದ ವೇಳೆ ಸ್ಥಳಕ್ಕೆ ಆಗಮಿಸಿದ ದುಷ್ಕರ್ಮಿಗಳು ದಂಪತಿಗೆ ಕಾರಿನಿಂದ ಡಿಕ್ಕಿ ಹೊಡೆದು ಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಿಬ್ಬರನ್ನೂ ಎಸಿ ಗಿರಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಜಯಲಕ್ಷ್ಮಿ ಕೊನೆಯುಸಿರೆಳೆದರು. ರಾಮಕೃಷ್ಣಯ್ಯ ಅವರಿಗೆ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ
.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು