ಅರಣ್ಯಾಧಿಕಾರಿಗಳ ದಾಳಿ: ಜಿಂಕೆ ಮಾಂಸ, ನಾಡ ಬಂದೂಕು, ಸ್ಪೋಟಕ ಪತ್ತೆ ಒಬ್ಬನ ಬಂಧನ, ಇಬ್ಬರು ಪರಾರಿ

ಗುಂಡ್ಲುಪೇಟೆ: ತಾಲ್ಲೂಕಿನ ಅಣ್ಣೂರುಕೇರಿ ಗ್ರಾಮದ ಮನೆಯೊಂದರ ಮೇಲೆ ಬಫರ್ ಜೊನ್ ವಲಯದ  ಅರಣ್ಯಧಿಕಾರಿಗಳು ಮತ್ತು ಚಾಮರಾಜನಗರದ ಸೈಬರ್ ಕ್ರೈಮ್ ಅಧಿಕಾರಿಗಳು ಜಂಟಿಯಾಗಿ  ದಾಳಿ ನಡೆಸಿಮನೆಯಲ್ಲಿ ಅಕ್ರಮವಾಗಿ ಬೆಳೆದಿದ್ದ 5 ಗಾಂಜಾ ಗಿಡಗಳನ್ನು ವಶಕ್ಕೆ ಪಡೆದು ಶಿವನಾಗಶೆಟ್ಟಿ ಎಂಬಾತನನ್ನು ಬಂಧಿಸಿದ್ದಾರೆ.
ಪ್ರಕಟಣಕ್ಕೆ ಸಂಬಂಧಿಸಿದಂತೆ ಬೆಳ್ಳಶೆಟ್ಟಿ ಮತ್ತು ಕರಿಯಶೆಟ್ಟಿ  ಎಂಬ ಇಬ್ಬರು ಆರೋಪಿಗಳುಪರಾರಿಯಾಗಿದ್ದಾರೆ ಎನ್ನಲಾಗಿದೆ.

ದಾಳಿ ಸಂದರ್ಭದಲ್ಲಿ ಆರೋಪಿಯ ಮನೆಯಲ್ಲಿ 5 ಕೆಜಿ ಜಿಂಕೆ ಮಾಂಸ, ನಾಡ ಬಂದೂಕು, 5 ಕರಡಿ ಉಗುರು,
 21 ಕಾಡು ಬೆಕ್ಕಿನ ಉಗುರು, 30 ಸಿಡಿಮದ್ದುಗಳು, 300 ಗ್ರಾಂ ಸಲ್ಫರ್ ಪುಡಿ, ಬಿಳಿಉಪ್ಪು, 2 ಬಂಡಲ್ ವೈರ್ ಗಳು ಪತ್ತೆಯಾಗಿವೆ.
ಆರೋಪಿ ಶಿವನಾಗಶೆಟ್ಟಿ ಮತ್ತುಆತನ ಸಹಚರರು ಸೇರಿ ವಾರಕ್ಕೆಎರಡು ಬಾರಿ ಹಳೆಪುರ ಗ್ರಾಮದಲ್ಲಿ ಜಿಂಕೆಗಳನ್ನು ಬೇಟೆಯಾಡಿ ಮಾಂಸವನ್ನುಮಾರಾಟ ಮಾಡುತಿದ್ದಾರೆಂದು ಅರಣ್ಯಾಧಿಕಾರಿಗಳಿ ಮಾಹಿತಿ ನೀಡಲಾಗಿತ್ತು.
ತಲೆ ಮರೆಸಿಕೊಂಡಿರುವ  ಅಣ್ಣೂರುಕೇರಿ ಗ್ರಾಮದ ಬೆಳ್ಳಶೆಟ್ಟಿ ಮತ್ತು ಕರಿಯಶೆಟ್ಟಿ ಪತ್ತೆಗಾಗಿ ಕಾರ್ಯಾಚರಣೆ ಕೈಗೊಂಡಿದ್ದು  ಬಂಧಿತ ಆರೋಪಿ ಶಿವನಾಗಶೆಟ್ಟಿಯನ್ನು ಹೆಚ್ಚಿನ ವಿಚಾರಣೆಗೆ ಪೋಲಿಸರ ವಶಕ್ಕೆ ನೀಡಲಾಗಿದೆ.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು