ಮಂಡ್ಯ ಬಂದ್‌ ಸಂಪೂರ್ಣ ಯಶಸ್ವಿ

ಮಂಡ್ಯ: ಟನ್‌, ಕಬ್ಬಿಗೆ 4,500 ರೂ, ಲೀಟರ್‌ ಹಾಲಿಗೆ 40 ರೂ. ನಿಗದಿ ಮಾಡುವಂತೆ ಮತ್ತು ಇನ್ನಿತರ ರೈತರ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ರಾಜ್ಯ ರೈತಸಂಘ ಕರೆ ನೀಡಿದ್ದ ಮಂಡ್ಯ ಬಂದ್‌ ಇಂದು ಸಂಪೂರ್ಣ ಯಶಸ್ವಿಯಾಯಿತು.
ಬೆಳಿಗ್ಗೆ 9 ಗಂಟೆಯಿಂದಲೇ ಪ್ರತಿಭಟನಾಕಾರರು ಮೈಸೂರು ಬೆಂಗಳೂರು ಹೆದ್ದಾರಿ ತಡೆದು ರಸ್ತೆ ತಡೆ ನಡೆಸಿದರು. ಜತೆಗೆ ಅಂಗಡಿ ಮುಂಗ್ಗಟ್ಟುಗಳ ಬಾಗಿಲು ಹಾಕುವಂತೆ ಮನವೊಲಿಸಿದರು. ಕೆಲವರು ಂಉಂದಾಗಿಯೇ ತಮ್ಮ ಅಂಗಡಿಗಳ ಬಾಗಿಲು ಹಾಕಿ ಬಂದ್ ಗೆ ಸಹಕರಿಸಿದರು. ರೈತ ಹಾಗೂ ದಲಿತ ಸಂಘಟನೆ, ಆಟೋ ಚಾಲಕರು, ಸಿನಿಮಾ ಮತ್ತು ಹೋಟೆಲ್‌ ಮಾಲಿಕರ ಸಂಘ ಬಂದ್‌ಗೆ ಬೆಂಲ ಸೂಚಿಸಿತ್ತು. ಪ್ರತಿಭಟನಾಕಾರರು ಸರ್ಕಾರದ  ವಿರುದ್ದ ದಿಕ್ಕಾರ ಕೂಗಿ ಕಬ್ಬು ಮತ್ತು ಹಾಲಿನ ಬೆಲೆ ಹೆಚ್ಚಿಸುವಂತೆ ಆಗ್ರಹಿಸಿದರು
ಒಟ್ಟಾರೆ ಮಂಡ್ಯ ಬಂದ್ ಸಂಪೂರ್ಣ ಯಶಸ್ವಿ ಕಂಡಿತು
ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ ಮಾತನಾಡಿ, ಬಿಜೆಪಿ ಸರ್ಕಾರ ರೈತಪರವಾಗಿಲ್ಲ. ಅದು ಉದ್ಯಮಿಗಳ ಪರವಾದ ಸರ್ಕಾರ, ನಾವು 42 ದಿನಗಳಿಂದ ಆಹೋರಾತ್ರಿ ಧರಣಿ ನಡೆಸುತ್ತಿದ್ದರೂ ಮುಖ್ಯಮಂತ್ರಿಗಳು ಬೆಲೆ ಹೆಚ್ಚಿಸುವ ನಿರ್ಧಾರ ಕೈಗೊಂಡಿಲ್ಲ. ಬಿಜೆಪಿ ಸರ್ಕಾರ ರೈತರು ಮತ್ತು ಜನ ವಿರೋಧಿ ಸರ್ಕಾರವಾಗಿದೆ. ರೈತರ ಬೆಳೆಗೆ ಬೆಂಬಲ ಬೆಲೆ ಕೊಡುವಲ್ಲಿ ವಿಫಲವಾಗಿದೆ. ಆದ್ದರಿಂದ ವೈಜ್ಞಾನಿಕ ಬೆಲೆ ಕೊಡುವ ತನಕ ನಮ್ಮ ಹೋರಾಟ ನಿಲ್ಲಿಸುವುದಿಲ್ಲ. ಮುಂದಿನ ದಿನಗಳಲ್ಲಿ ವಿಧಾನ ಸೌಧವನ್ನು ಮುತ್ತಿಗೆ ಹಾಕುವ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಕದಾಸಂಸ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ, ದಸಂಸ ಒಕ್ಕೂಟದ ಗುರುಪ್ರಸಾದ್‌ ಕೆರಗೂಡು ಮುಂತಾದವರು ಇದ್ದರು
.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು