ಕೆ.ಎಂ.ದೊಡ್ಡಿಯಲ್ಲಿ ವಿಶ್ವ ರೈತ ದಿನಾಚರಣೆ ಹಾಗೂ ರೈತ ನಾಯಕ ದಿ.ಕೆ.ಎಸ್.ಪುಟ್ಟಣ್ಣಯ್ಯ ಅವರ ಜನ್ಮದಿನಾಚರಣೆ ಪ್ರಯುಕ್ತ ವಿಶೇಷ ಚೇತನ ರೈತರಿಗೆ ಸನ್ಮಾನ

ಟಿ.ಬಿ.ಸಂತೋಷ, ಮದ್ದೂರು
ಮದ್ದೂರು: ತಾಲೂಕಿನ ಕೆ.ಎಂ.ದೊಡ್ಡಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ 'ವಿಶ್ವ ರೈತ ದಿನಾಚರಣೆ’ ಹಾಗೂ ರೈತ ನಾಯಕ ದಿ ಕೆ.ಎಸ್.ಪುಟ್ಟಣ್ಣಯ್ಯ ಅವರ ಜನ್ಮ ದಿನಾಚರಣೆ ಆಚರಿಸಲಾಯಿತು. 
ಮುಖಂಡರು ಕೆ.ಎಂ.ದೊಡ್ಡಿಯ ವಿಶ್ವೇಶ್ವರಯ್ಯ ವೃತ್ತದಲ್ಲಿ ಸರ್ ಎಂವಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ರೈತಪರ ಘೋಷಣೆ ಕೂಗಿದರು.
ರೈತ ಮುಖಂಡ ಅಣ್ಣುರು ಮಹೇಂದ್ರ ಮಾತನಾಡಿ, ರೈತರ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನೀಡದ ಕೇಂದ್ರ ಸರ್ಕಾರ, ರಸಗೊಬ್ಬರ, ಕೀಟನಾಶಕ ಸೇರಿದಂತೆ ಮತ್ತಿತರ ಕೃಷಿ ಉಪಕರಣಗಳ ಬೆಲೆ ಹೆಚ್ಚಿಸಿರುವುದು ಅನ್ಯಾಯ ಎಂದರು.
ಈ ಸಂದರ್ಭದಲ್ಲಿ ಅಂಗವಿಕಲ ರೈತ ಹನುಮೇಗೌಡ ಅವರನ್ನು ಸನ್ಮಾನಿಸಲಾಯಿತು. 
ರೈತ ಮುಖಂಡರಾದ ಅಣ್ಣುರು ಸಿದ್ದೆಗೌಡ, ಮಲ್ಲೇಶ್, ಕೆ.ಪಿ. ದೊಡ್ಡಿ ಪುಟ್ಟಸ್ವಾಮಿ, ಬನ್ನಹಳ್ಳಿ ರಮೇಶ್, ಕರಡಕೆರೆ ಯೋಗೇಶ್, ರಘು ವೆಂಕಟೆಗೌಡ, ಹೊಸಹಳ್ಳಿ ವಿಜಯ್ ಕುಮಾರ್, ಕರಡಕೆರೆ ರಾಮಣ್ಣ, ಮಣಿಗೆರೆ ರಾಮಣ್ಣ, ಸಿಂಗಟಗೆರೆ ರವಿ, ಹೊಸಹಳ್ಳಿ ಸಿದ್ದರಾಜು, ಸಬ್ಬನಹಳ್ಳಿ ಶಿವಲಿಂಗ, ಬೊಪ್ಪಸಮುದ್ರ ದೇವರಾಜು, ಚಿಕ್ಕ ಮರಿಗೌಡ, ಅಣ್ಣುರು ಕುಮಾರ್ ಮುಂತಾದವರು ಇದ್ದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು