ಜೆಡಿಎಸ್ ಅಧಿಕಾರಕ್ಕೆ ಬಂದರೆ ಮಾತ್ರ ರೈತರ ಅಭಿವೃದ್ದಿ : ಹೆಚ್.ಡಿ.ಕುಮಾರಸ್ವಾಮಿ

ಟಿ.ಬಿ.ಸಂತೋಷ, ಮದ್ದೂರು
ಮದ್ದೂರು : ಜೆಡಿಎಸ್ ಅಧಿಕಾರಕ್ಕೆ ಬಂದರೆ ಮಾತ್ರ ರಾಜ್ಯದಲ್ಲಿ ರೈತರು, ಬಡವರು, ಕೂಲಿ ಕಾರ್ಮಿಕರ ಅಭಿವೃದ್ಧಿ ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.  
ಕೆ.ಎಂ.ದೊಡ್ಡಿ ಮಾರ್ಗವಾಗಿ ಮದ್ದೂರು ತಾಲೂಕಿಗೆ ಅಗಮಿಸಿದ ಪಂಚರತ್ನ ಯಾತ್ರೆಯಲ್ಲಿ ಅವರು ಮಾತನಾಡಿದರು. 

ರೈತರ ಬೆಳೆಗೆ ವೈಜ್ಞಾನಿಕ ಬೆಲೆ, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉನ್ನತ ಶಿಕ್ಷಣ, ಉತ್ತಮ ಆರೋಗ್ಯ, ಪ್ರತಿಯೊಬ್ಬರಿಗೂ ಮನೆ, ಯುವ ಸಬಲೀಕರಣ, ಮಹಿಳೆಯರ ಆರ್ಥಿಕ ಚೈತನ್ಯ ಮುಂತಾದ ಹತ್ತು ಹಲವು ಯೋಜನೆಗಳನ್ನು ಮುಂದಿಟ್ಟು ಪಂಚರತ್ನ ಯಾತ್ರೆಯ ಮೂಲಕ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಸ್ವತಂತ್ರವಾಗಿ ಅಧಿಕಾರ ತರುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಯಾತ್ರೆ ಹಮ್ಮಿಕೊಂಡಿದ್ದೇವೆ ಎಂದರು.
ರಾಜ್ಯದ ಜನತೆ ಜೆಡಿಎಸ್ ಪಕ್ಷಕ್ಕೆ ಅಧಿಕಾರ ನೀಡಿದರೆ  ಪಂಚರತ್ನ ಯೋಜನೆ ಅನುμÁ್ಠನದ ಜೊತೆಗೆ ರಾಜ್ಯದ  ಎಲ್ಲಾ ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ಮಾಡಲಾಗುವುದು. ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಕೆ.ಎಂ.ದೊಡ್ಡಿಯಿಂದ ಬೈಕ್ ರ್ಯಾಲಿ ಮೂಲಕ ಆಗಮಿಸಿದ ಪಂಚರತ್ನ ಯಾತ್ರೆಗೆ ಮದ್ದೂರಿನಲ್ಲಿ ಅದ್ಧೂರಿಯಾಗಿ ಸ್ವಾಗತ ಕೋರಲಾಯಿತು. ಪೂಜಾ ಕುಣಿತ. ತಮಟೆ, ನಗಾರಿ,  ಜಾನಪದ ಕಲಾ ತಂಡಗಳೊಂದಿಗೆ ಪಟಾಕಿ ಸಿಡಿಸಿ ಈಡುಗಾಯಿ ಒಡೆಯುವುದರ ಮೂಲಕ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು. 

ಇದಕ್ಕೂ ಮುನ್ನ ಕೆ.ಎಂ.ದೊಡ್ಡಿ ಬಳಿಯ ವೀರ ಯೋಧ ಗುರು ಅವರ ಸ್ಮಾರಕಕ್ಕೆ ಹೆಚ್.ಡಿ.ಕೆ. ಮಾಲಾರ್ಪಣೆ ಮಾಡಿದರು.
ಅಭಿಮಾನಿಗಳು ಹೆಲಿಕಾಪ್ಟರ್ ಮೂಲಕ ಕುಮಾರಸ್ವಾಮಿ ಅವರಿಗೆ ಪುಷ್ಪ ವೃಷ್ಟಿ ನಡೆಸಿ ಅಭಿಮಾನ ಮೆರೆದರು.  ಬೃಹತ್ ಗಾತ್ರದ ಹೂವಿನ ಹಾರ, ಜೋಳದ ಹಾರ, ಬೃಹತ್ ಕಬ್ಬಿನ ಹಾರ ಹಾಗೂ ಗೆಡ್ಡೆಕೋಸಿನ ಹಾರವನ್ನು  ಹಾಕಿ ಗಮನ ಸೆಳೆದರು. 
ಶಾಸಕ ಡಿ.ಸಿ. ತಮ್ಮಣ್ಣ ಅಸ್ವಸ್ಥ : ಪಂಚರತ್ನ ಯಾತ್ರೆ ಸಾಗುವ ವೇಳೆಯಲ್ಲಿ ಬಿಸಿಲಿನ ತಾಪಕ್ಕೆ ಶಾಸಕ ಡಿಸಿ ತಮ್ಮಣ್ಣ ಅಸ್ವಸ್ಥಗೊಂಡ ಘಟನೆ ನಡೆಯಿತು. ಕೂಡಲೇ ಡಾ. ಸೌಮ್ಯ ಮತ್ತಿತರ ವೈದ್ಯರು ಸ್ಥಳದಲ್ಲಿಯೇ ಚಿಕಿತ್ಸೆ ನೀಡಿದರು.
ಮಾಜಿ ಎಂಎಲ್‍ಸಿ ಕೆ.ಟಿ. ಶ್ರೀಕಂಠಗೌಡ, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಡಿ.ರಮೇಶ್, ತಾಲೂಕು ಅಧ್ಯಕ್ಷ ಚಿಕ್ಕ ತಿಮ್ಮೇಗೌಡ, ಸೌಮ್ಯ ರಮೇಶ್ ಮುಂತಾದವರು ಇದ್ದರು.





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು