ಚಿರತೆ ದಾಳಿ : ಕುಡುಗೋಲಿನಿಂದ ಹೊಡೆದು ಬಚಾವಾದ ರೈತ

ನಾಗೇಂದ್ರ ಕುಮಾರ್‌, ಟಿ.ನರಸೀಪುರ
ಟಿ.ನರಸೀಪುರ : ತಾಲ್ಲೂಕಿನಲ್ಲಿ ಚಿರತೆ ದಾಳಿ ಮುಂದುವರಿದಿದ್ದು, ಬುಧವಾರ ಬೆಳಿಗ್ಗೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತನೊಬ್ಬನ ಮೇಲೆ ಚಿರತೆ ದಾಳಿ ನಡೆಸಿದಾಗ ಆತ ಕುಡುಗೋಲಿನಿಂದ ಚಿರತೆಗೆ ಹೊಡೆದು ಓಡಿಸಿದ ಘಟನೆ ತಾಲ್ಲೂಕಿನ ಬನ್ನೂರು ಹೋಬಳಿ ಗೊರವನಹಳ್ಳಿ ಗ್ರಾಮದಲ್ಲಿ ನಡೆದಿದೆ.
ರೈತ ನಿಂಗೇಗೌಡ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಚಿರತೆ ದಾಳಿ ನಡೆಸಿತು. ತಕ್ಷಣ ತಮ್ಮ ಸಮಯ ಪ್ರಜ್ಞೆಯಿಂದ ನಿಂಗೇಗೌಡ ತನ್ನ ಕೈಯಲ್ಲಿದ್ದ ಕುಡುಗೋಲನ್ನು ಚಿರತೆಗೆ ಬೀಸಿ ಪಕ್ಕದಲ್ಲಿ ಇದ್ದ ಕಾಲುವೆಗೆ ಜಿಗಿದರು. ಈ ವೇಳೆ ರೈತನ ಕುಡುಗೋಲು ಏಟಿಗೆ ತತ್ತರಿಸಿದ ಚಿರತೆ  ಸಮೀಪದ ಮಾವಿನ ತೋಪಿನಲ್ಲಿ ಓಡಿ ಹೋಯಿತು ಎಂದು ನಿಂಗೇಗೌಡ ತಿಳಿಸಿದ್ದಾರೆ. ಚಿರತೆ ನೋಡಿ ನಾನೇನೂ ಹೆದರಲಿಲ್ಲ. ಏನಾದರು ಆಗಲಿ ಅದರ ಪ್ರಾಣವನ್ನು ತೆಗೆದು ಜನರಿಗೆ ನೆಮ್ಮದಿ ತರಬೇಕೆಂದಿದ್ದೆ ಅದು ಬಚಾವಾಯಿತು ಎಂದರು.
ಬನ್ನೂರು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ನಿಂಗೇಗೌಡ ಅವರಿಗೆ ಚಿಕಿತ್ಸೆ ನೀಡಲಾಗಿದೆ. 
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು