ವರುಣಾದಿಂದಲೇ ಸ್ಪರ್ಧಿಸುವಂತೆ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಮುಖಂಡರು

ಟಿ.ನರಸೀಪುರ : ವರುಣಾ ವಿಧಾನ ಸಭಾ ಕ್ಷೇತ್ರದ ಮತದಾರರು ಯಾವುದೇ ಷಡ್ಯಂತ್ರ ಮತ್ತು ಆಮಿಷಗಳಿಗೆ ಒಳಗಾಗುವುದಿಲ್ಲ ಹಾಗಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ವರುಣಾ ವಿಧಾನ ಸಭಾ ಕ್ಷೇತ್ರದಿಂದಲೇ ಸ್ಪರ್ಧೆ ಮಾಡಬೇಕೆಂದು ಮೈಸೂರು ಜಿಲ್ಲಾ ಗ್ರಾಮಾಂತರ ಮಾಧ್ಯಮ ವಕ್ತಾರ ಸಂತೃಪ್ತಿ ಕುಮಾರ್ ಮನವಿ ಮಾಡಿದರು.
ಪಟ್ಟಣದ ಕಬಿನಿ ಅತಿಥಿ ಗೃಹದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ,   ಸಿದ್ದರಾಮಯ್ಯ ಅವರನ್ನು ಸೋಲಿಸಲು ಬಿಜೆಪಿಯವರು ಹಲವು ಷಡ್ಯಂತ್ರಗಳನ್ನು ರೂಪಿಸಿದ್ದಾರೆ. ಅವರನ್ನು ಸೋಲಿಸುವುದೇ ಅವರ ಮುಖ್ಯ ಗುರಿಯಾಗಿದೆ. ಆದರೆ ಅದು ಕನಸಿನ ಮಾತು. ಸಿದ್ದರಾಮಯ್ಯ ಅವರು ಎಲ್ಲೇ ಚುನಾವಣೆಗೆ ನಿಂತರೂ ಗೆಲುವು ಶತಸಿದ್ದ, ಆದರೇ, ವರುಣಾ ಕ್ಷೇತ್ರವೇ ಸೂಕ್ತ ಎಂದರು.
ವರುಣಾದಿAದಲೇ ಸ್ಪರ್ಧೆ ಮಾಡುವಂತೆ ತಿಳಿಸಬೇಕೆಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಸಹ ಬರೆಯಲಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ  ಮಾಜಿ ಎಪಿಎಂಸಿ ಸದಸ್ಯ ಸೋಮಣ್ಣ ನಾಯಕ, ಬಿಳಿಗೆರ ಹುಂಡಿ ಮಹದೇವ, ಡಾ.ಪ್ರದೀಪ್, ಸಿದ್ದ ಬಸವೇಗೌಡ, ಹೆಳವರಹುಂಡಿ ಬಸಪ್ಪ, ಗೋವಿಂದರಾಜು, ನಾಗೇಂದ್ರ ಅರ್ಜುನ, ರವಿ, ಸೋಮಣ್ಣ, ರಾಜೇಂದ್ರ, ಪ್ರಕಾಶ್, ರಾಘವೇಂದ್ರ, ಸಿದ್ದರಾಜು ಹಾಜರಿದ್ದರು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು