ಬಂಡಳ್ಳಿ ಗ್ರಾಮದಲ್ಲಿ ಎಸ್‍ಕೆಡಿಆರ್‍ಡಿಪಿ ಒಕ್ಕೂಟ ಪದಾಧಿಕಾರಿಗಳ ಪದಗ್ರಹಣ: ಸಾಧನಾ ಸಮಾವೇಶ

ಶಾರೂಕ್ ಖಾನ್, ಹನೂರು
ಹನೂರು : ಶ್ರೀಕ್ಷೇತ್ರ ಧರ್ಮಸ್ಥಳ  ಗ್ರಾಮಾಭಿವೃದ್ಧಿ ಯೋಜನೆ ಹನೂರು ಎ ವಲಯದ ಬಂಡಳ್ಳಿ ಗ್ರಾಮದಲ್ಲಿ ಒಕ್ಕೂಟ ಪದಾಧಿಕಾರಿಗಳ ಪದಗ್ರಹಣ ಹಾಗೂ ಸಾಧನಾ ಸಮಾವೇಶ ನಡೆಯಿತು.

ಮೈಸೂರು ವಿಭಾಗದ ಪ್ರಾದೇಶಿಕ ನಿರ್ದೇಶಕ ಜೈರಾಮ್ ನೆಲ್ಲಿ ತಾಯಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ಸಂಸ್ಥೆಯ ಯೋಜನೆ ಮೂಲಕ ಬಡವರಿಗೆ, ಹಿಂದುಳಿದವರಿಗೆ, ಶೋಷಿತರಿಗೆ, ಕೃಷಿಕರಿಗೆ ಮತ್ತು ವ್ಯಾಪಾರಸ್ಥರ ಆರ್ಥಿಕ ಚೇತನಕ್ಕೆ ಸಹಕರಿಸಲು, ಅವರೂ ಕೂಡ ತಮ್ಮ ವ್ಯವಹಾರದಲ್ಲಿ ಅಭಿವೃದ್ಧಿ ಹೊಂದಿ ಉತ್ತಮ ಜೀವನ ನಡೆಸಲು ಸಹಕಾರಿಯಾಗಲು ಸಂಸ್ಥೆಯಿಂದ ಸಾಲ ಸೌಲಭ್ಯ ನೀಡೆಲಾಗುತ್ತಿದೆ ಎಂದರು.
ಮಾಜಿ ಶಾಸಕಿ ಪರಿಮಳ ನಾಗಪ್ಪ ಮಾತನಾಡಿ, ಧರ್ಮಸ್ಥಳ ಸಂಘ ಅತ್ಯುತ್ತಮವಾದ ಸಂಘಟನೆಯಾಗಿದೆ. ಮಹಿಳೆಯರಿಗೆ ಶಿಕ್ಷಣ, ವ್ಯವಹಾರ ಜ್ಞಾನ, ಶಿಸ್ತು, ಸಮಯ ಪಾಲನೆ, ಹಿರಿಯರಿಗೆ ಗೌರವ ಹಾಗೂ ಕುಟುಂಬ ನಿರ್ವಹಣೆಯ ಬಗ್ಗೆ ತರಬೇತಿ ಮತ್ತು ಜಾಗೃತಿ ಮೂಡಿಸುವ ಮೂಲಕ ರಾಜ್ಯಕ್ಕೆ ಮಾದರಿಯಾಗಿದೆ ಎಂದರು.
ದೊಡ್ಡ ಮಠದ ಶ್ರೀ ಪಲಹಾರ ಪ್ರಭುದೇವ ಸ್ವಾಮೀಜಿ, ಜಿಲ್ಲಾ ನಿರ್ದೇಶಕಿ ಲತಾ ಬಂಗೇರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಿಲತ್ ಜಾನ್, ಯೋಜನಾಧಿಕಾರಿ ಪ್ರವೀಣ್ ಕುಮಾರ್, ಡಾ.ಬಿ.ನಾಗಲಿಂಗಪ್ಪ, ಜಿ.ರಾಜಪ್ಪ, ಚಾಮುಲ್ ನಿರ್ದೇಶಕ ಶಾಹುಲ್ ಅಹಮದ್ ಮುಂತಾದವರು ಇದ್ದರು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು