ರಸ್ತೆ ಅಪಘಾತದಲ್ಲಿ ತಂದೆ, ಮಗ ಸೇರಿದಂತೆ ಪಾಂಡವಪುರ ತಾಲ್ಲೂಕು ಚಿಕ್ಕಾಡೆ ಗ್ರಾಮದ ಮೂವರು ಯಾತ್ರಿಕರ ಸಾವು
ಡಿಸೆಂಬರ್ 24, 2022
ಚನ್ನಪಟ್ಟಣ : ಇಲ್ಲಿನ ವೈಶಾಲಿ ಹೋಟೆಲ್ ಮುಂಭಾಗ ಶನಿವಾರ ಬೆಳಿಗ್ಗೆ ಟೆಂಪೊ ಟ್ರಾವಲರ್ ಹಾಗೂ ಕ್ಯಾಂಟರ್ ವಾಹನಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಪಾಂಡವಪುರ ತಾಲ್ಲೂಕು ಚಿಕ್ಕಾಡೆ ಗ್ರಾಮದ ಮೂವರು ಮೃತಪಟ್ಟಿದ್ದಾರೆ. ಚಿಕ್ಕಾಡೆ ಗ್ರಾಮದ ಕೃಷ್ಣೇಗೌಡ (45) ಇವರ ಮಗ ಶ್ರೀನಿವಾಸ (15) ಮತ್ತು ಮಹೇಶ್ (45) ಮೃತಪಟ್ಟವರು. ಮೃತರು ತಿರುಪತಿ ಪ್ರವಾಸ ಮುಗಿಸಿ ಸ್ವಗ್ರಾಮಕ್ಕೆ ಟಿ.ಟಿ. ವಾಹನದಲ್ಲಿ ವಾಪಸ್ ಆಗುತ್ತಿದ್ದರು. ಈ ವೇಳೆ ಹೆದ್ದಾರಿಯಲ್ಲಿ ಮುಂದೆ ಸಾಗುತ್ತಿದ್ದ ಕ್ಯಾಂಟರ್ ವಾಹನಕ್ಕೆ ಹಿಂದಿನಿಂದ ಬಂದ ಟಿ.ಟಿ. ವಾಹನ ಡಿಕ್ಕಿಯಾಯಿತು. ಅಪಘಾತದ ರಭಸಕ್ಕೆ ವಾಹನದಲ್ಲಿದ್ದ ಇಬ್ಬರು ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು. ಮೃತದೇಹಗಳನ್ನು ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
0 ಕಾಮೆಂಟ್‌ಗಳು