ಭಾರತಿನಗರದಲ್ಲಿ ವೀರ ಯೋಧ ಗುರು ಸ್ಮಾರಕ ಲೋಕಾರ್ಪಣೆ : ಪುತ್ಥಳಿಗೆ ಪುಷ್ಪಮಾಲೆ ಅರ್ಪಿಸಿದ ಶಾಸಕದ್ವಯರು

 -ಸಂತೋಷ ಟಿ.ಬಿ. ಮದ್ದೂರು

ಮದ್ದೂರು : ತಾಲ್ಲೂಕಿನ ಭಾರತಿನಗರದಲ್ಲಿ ನಿರ್ಮಿಸಿರುವ ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧ ಗುರು ಅವರ ಪುತ್ಥಳಿಯನ್ನು ಶಾಸಕಡಿ.ಸಿ.ತಮ್ಮಣ್ಣ ಹಾಗೂ ವಿಧಾನ ಪರಿಷತ್ ಸದಸ್ಯ ಮಧು ಜಿ.  ಮಾದೇಗೌಡ ಶುಕ್ರವಾರ ಅನಾವರಣಗೊಳಿಸಿದರು.
ಮದ್ದೂರು ಮಳವಳ್ಳಿ ಮುಖ್ಯರಸ್ತೆಯಲ್ಲಿ ಸರ್ಕಾರದ ವತಿಯಿಂದ  ನಿರ್ಮಾಣಗೊಂಡಿರುವ ಈ ಸ್ಮಾರಕದಲ್ಲಿ ಯೋಧ ಗುರು ಅವರ ಭಾವಚಿತ್ರಕ್ಕೆ ಶಾಸಕರು ಮತ್ತು ಗುರು ಕುಟುಂಬದವರು ಪುμÁ್ಪರ್ಚನೆ ಸಲ್ಲಿಸಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. 
ಈ ಸಂದರ್ಭದಲ್ಲಿ ಶಾಸಕ ಡಿ.ಸಿ. ತಮ್ಮಣ್ಣ ಮಾತನಾಡಿ, 2019ರ ಫೆಬ್ರವರಿ 14 ರಂದು ಪುಲ್ವಾಮ ದಾಳಿಯಲ್ಲಿ ಮೃತಪಟ್ಟ 40 ಮಂದಿ ಯೋಧರಲ್ಲಿ ಕರ್ನಾಟಕ ವೀರ ಯೋಧ ಗುರು ಅವರೂ ಸೇರಿದ್ದರು.
ಗುರು ಅವರ ಮರಣವು ವೀರತ್ವದ ಸಂಕೇತವಾಗಿದೆ ಎಂದರು.
ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುವುದರ ಜತೆಗೆ ಒಳ್ಳೆಯ ಸಂಸ್ಕಾರವನ್ನೂ ನೀಡಿ ದೇಶದ ಸತ್ಪ್ರಜೆಗಳನ್ನಾಗಿ ಮಾಡಬೇಕೆಂದು ಸಲಹೆ ನೀಡಿದರು. 
ವಿಧಾನ ಪರಿಷತ್ ಸದಸ್ಯ ಮಧು ಜಿ. ಮಾದೇಗೌಡ ಮಾತನಾಡಿ, ಕಡಿಮೆ ಅವಧಿಯಲ್ಲಿ ಸರ್ಕಾರ ವೀರ ಯೋದನ ಸ್ಮಾರಕ ನಿರ್ಮಾಣ ಮಾಡಿರುವುದು ಸಂತಸದ ಸಂಗತಿ ಇದರ ಸಂರಕ್ಷಣೆ ಮತ್ತು ನಿರ್ವಹಣೆ ಉತ್ತಮವಾಗಿರಲಿ ಎಂದರು. 
ದಿ.ಗುರು ಅವರ ಪತ್ನಿ ಕಲಾವತಿ, ಗ್ರಾಪಂ ಅಧ್ಯಕ್ಷ ವೆಂಕಟೇಶ್, ಮಂಡ್ಯ ಮಹಿಳಾ ಸಮಾಜದ ಪದ್ಮಾವತಿ, ಮುಖ್ಯ ಎಂಜಿನಿಯರ್ ನರೇಶ್, ಸಿಆರ್‍ಪಿಎಫ್ ನಿವೃತ್ತ ಯೋಧ ಸಿ.ಕೆ ರಮೇಶ್, ಮಡಿವಾಳ ಸಂಘದ ರಾಜ್ಯಾಧ್ಯಕ್ಷ ನಂಜಪ್ಪ, ಉಪ ತಹಶೀಲ್ದಾರ್ ಶಿವಲಿಂಗಯ್ಯ, ಜೆಡಿಎಸ್ ತಾಲೂಕು ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಪಿಡಿಓ ಸುಧಾ, ಶ್ರೀನಿವಾಸ, ರವಿ  ಮುಂತಾದವರು ಇದ್ದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು