ಮದ್ದೂರು : ತಾಲೂಕಿನ ಭಾರತೀನಗರದ ಅಂಬೇಡ್ಕರ್ ಭವನದಲ್ಲಿ ಕೆ.ಎಂ.ದೊಡ್ಡಿ ಗ್ರಾಮದ ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ವತಿಯಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುμÁ್ಪರ್ಚನೆ ಸಲ್ಲಿಸುವ ಮೂಲಕ 66ನೇ ಪುಣ್ಯಸ್ಮರಣೆಯ ಗೌರವ ಸಲ್ಲಿಸಲಾಯಿತು. ಈ ವೇಳೆ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಶಿವಮಲವಯ್ಯ ಮಾತನಾಡಿ, ವಿಶ್ವ ನಾಯಕರಾಗಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರು ಭಾರತದ ದಮನಿತರ ದನಿಯಾಗಿ, ಮಹಾನ್ ಮಾನವತಾವಾದಿ. ವಿಶ್ವಶ್ರೇಷ್ಠ ಸಂವಿಧಾನ ನೀಡುವ ಮೂಲಕ ಭಾರತದ ಅಭಿವೃದ್ಧಿಗೆ ಭದ್ರ ಬುನಾದಿಯನ್ನು ಹಾಕಿದ್ದಾರೆ. ಅಂತಹ ಮಹಾನ್ ನಾಯಕರ ಆದರ್ಶಗಳನ್ನು ನಾವು ಅನುಸರಿಸಿ ಅವರು ತೋರಿದ ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕು ಎಂದರು. ಉಪ ತಹಶೀಲ್ದಾರ್ ಶಿವಲಿಂಗಯ್ಯ, ದಲಿತ ಮುಖಂಡರಾದ ಅಮೀನ್ ಶಿವಲಿಂಗಯ್ಯ, ಕಾಡುಕೊತ್ತನಹಳ್ಳಿ ಚಿದಂಬರ ಮೂರ್ತಿ, ಕೆಂಪರಾಜು, ಕರಡಕೆರೆ ಯೋಗೇಶ್, ಟಿ.ಬಿ.ಹಳ್ಳಿ ಸಂತೋμï, ಗ್ರಾಪಂ ಸದಸ್ಯ ಅಜಯ್, ಗುಡಿಗೆರೆ ಪ್ರಸಾದ್, ವೆಂಕಟೇಶ್, ಇಗ್ಗಳೂರು ಕೆಂಪರಾಜು ಮುಂತಾದವರು ಇದ್ದರು.
0 ಕಾಮೆಂಟ್‌ಗಳು