ಹೆಚ್‍ಡಿಕೆ ಹುಟ್ಟುಹಬ್ಬ: ರೋಗಿಗಳಿಗೆ ಹಣ್ಣು ಹಂಪಲು ವಿತರಣೆ
ಡಿಸೆಂಬರ್ 16, 2022
ಮದ್ದೂರು : ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಹುಟ್ಟು ಹಬ್ಬದ ಪ್ರಯುಕ್ತ ತಾಲೂಕು ಜೆಡಿಎಸ್ ಯುವ ಘಟಕದ ವತಿಯಿಂದ ಕೆ.ಎಂ.ದೊಡ್ಡಿಯ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು. ಜೆಡಿಎಸ್ ಯುವ ಘಟಕದ ಪ್ರಧಾನ ಕಾರ್ಯದರ್ಶಿ ರಘು ವೆಂಕಟೆಗೌಡ ಮಾತನಾಡಿ, ಹೆಚ್.ಡಿ.ಕುಮಾರಸ್ವಾಮಿ ಅವರು ನಾಡಿನ ರೈತರ ಆಶಾಕಿರಣವಾಗಿದ್ದಾರೆ. ಲಾಟರಿ ನಿμÉೀಧ, ಸಾರಾಯಿ ನಿμÉೀಧ, ರೈತರ ಸಾಲ ಮನ್ನಾ ಮಾಡಿದ ರಾಜ್ಯದ ಹೆಮ್ಮೆಯ ರಾಜಕಾರಣಿಯಾಗಿದ್ದು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಲಿ ಎಂದು ಹಾರೈಸಿದರು. ಗುರುದೇವರಹಳ್ಳಿ ಅರವಿಂದ್, ಪ್ರತಾಪ್, ಕರಡಕೆರೆ ಯೋಗೇಶ್, ಅಭಿಶೇಕ, ಗೌತಮ್, ಬಾಲು, ಸ್ವಾಮಿ, ಪವನ್, ಗೌರಿಶಂಕರ್ ಮುಂತಾದವರು ಇದ್ದರು.
0 ಕಾಮೆಂಟ್‌ಗಳು