ಮೈ ಬಿಲ್ಡ್-2022 ಪ್ರಮುಖ ಆಕರ್ಷಣೆಯಾದ `ಹೌಸ್ ಆಫ್ ನಕ್ಷಾ’

ಮೈಸೂರು: ನಗರದ  ಪ್ರಮುಖ ನಿರ್ಮಾಣ ಕಂಪನಿಗಳ ಒಕ್ಕೂಟವಾದ ನಕ್ಷಾ ಗ್ರೂಪ್ ಸಂಸ್ಥೆಯು ಮೈಸೂರಿಗರಿಗಾಗಿ ಅತಿದೊಡ್ಡ ರಿಯಲ್ ಎಸ್ಟೇಟ್ ಅನುಭವವನ್ನು ನೀಡಲು ಮುಂದಾಗಿದ್ದು, ಹೌಸ್ ಆಫ್ ನಕ್ಷಾ ಎಂಬ ಹೆಸರಿನಲ್ಲಿ ಡಿಸೆಂಬರ್ 8ರಿಂದ 12 ರವರೆಗೆ ನಗರದ ಮಹಾರಾಜ ಗ್ರೌಂಡ್‍ನಲ್ಲಿ ನಡೆಯಲಿರುವ ಮೈ ಬಿಲ್ಡ್ 2022 ರಲ್ಲಿ ತನ್ನ ಮಳಿಗೆಗಳನ್ನು ಪ್ರಾರಂಭಿಸಿದೆ.
ʻನಾವು ಈ ಬಾರಿ ಮೈ ಬಿಲ್ಡ್‍ನಲ್ಲಿ 8 ಮಳಿಗೆಗಳನ್ನು ಖರೀದಿಸಿದ್ದು. ಜನರಿಗೆ ಪ್ರದರ್ಶನಕ್ಕಿಂತ ಹೆಚ್ಚಾಗಿ ಒಂದು ಅನುಭವವನ್ನು ನೀಡುವುದು ನಮ್ಮ ಉದ್ದೇಶ. ಆದ್ದರಿಂದ ವಿನೂತನವಾಗಿ ಮೈಸೂರಿನಲ್ಲಿ ಮೊದಲ ಬಾರಿಗೆ ಈ ಪ್ರಯತ್ನ ಮಾಡುತ್ತಿದ್ದೇವೆ. ಅತ್ಯುನ್ನತ ಗುಣಮಟ್ಟದ ವಸ್ತುಗಳಿಂದ ತಯಾರಾದ, ಉತ್ಕೃಷ್ಟ ರೀತಿಯಲ್ಲಿ ವಿನ್ಯಾಸಗೊಂಡ ಮನೆಗಳು ನಿಜವಾಗಿಯೂ ಹೇಗಿರುತ್ತವೆ ಎಂಬ ಅನುಭವ ಗ್ರಾಹಕರಿಗೆ ಸಿಗಲಿದೆ. ಅವರಿಗೆ ನಿಜವಾದ ಮನೆಯಲ್ಲೇ ನಡೆದಂತೆ ಭಾಸವಾಗುತ್ತದೆʼ ಎಂದು ನಕ್ಷಾ ಗ್ರೂಪ್‍ನ ಸಿಇಒ ವಿನಯ್ ಶಂಕರ್ ತಿಳಿಸಿದರು. 
ನಕ್ಷಾ ಗ್ರೂಪ್‍ನವರು ಪೀಠೋಪಕರಣಗಳು, ಇಂಟೀರಿಯರ್, ಡೈನಿಂಗ್, ಕಿಚನ್, ಸೋಫಾ, ಪ್ಯಾಂಟ್ರಿ, ಲಾಂಜ್, ಟಿವಿ ಕ್ಯಾಬಿನೆಟ್‍ಗಳನ್ನು ನಕ್ಷಾ ಫರ್ನಿಶಿಂಗ್ ಸ್ಟುಡಿಯೋ, ಅಪ್‍ವಕ್ರ್ಸ್, ಸ್ಪ್ಯಾμïಬೆರ್ರಿ, ನಕ್ಷಾ ಬಿಲ್ಡ್‍ರ್ಸ್ ಹಾಗೂ ನಕ್ಷಾ ಕಲೆಕ್ಟಿವ್ಸ್, ನಕ್ಷಾ ಹೋಮ್ಸ್ ನಿಂದ ತರಿಸಿಕೊಳ್ಳಲಾಗಿದೆ. ಇವೆಲ್ಲವೂ ಭಾರತದಲ್ಲಿ ತಯಾರಾದ ಉತ್ಪನ್ನಗಳು ಎಂದು ವಿನಯ್ ವಿವರಣೆ ನೀಡಿದರು.  
ಒಂದು ದಶಕದಿಂದ ನಕ್ಷಾ ಗ್ರೂಪ್ ಮೈಸೂರಿನಲ್ಲಿ ವಾಣಿಜ್ಯ ಹಾಗೂ ವಸತಿ ಉದ್ದೇಶಕ್ಕೆ ಉತ್ಕೃಷ್ಟ ಗುಣಮಟ್ಟದ ಉತ್ಪನ್ನಗಳು, ಸೇವೆಯನ್ನು ನೀಡುತ್ತಾ ಬಂದಿದೆ. ʻಗ್ರಾಹಕರಿಗೆ ತೃಪ್ತಿಯಾದರμÉ್ಟೀ ನಮಗೂ ಖುಷಿ. ನಾವು ಉತ್ತಮ ಗುಣಮಟ್ಟದ ಉತ್ಪನ್ನ ನೀಡಿದರೆ ಗ್ರಾಹಕರು ಖುಷಿಯಾಗುತ್ತಾರೆ ಎಂಬುದನ್ನು ನಾವು ನಂಬಿದ್ದೇವೆ. ಜನರ ವಿಶ್ವಾಸ ಗಳಿಸಿದ್ದೇವೆ. ನಿರ್ಮಾಣಕ್ಕೆ ಸಂಬಂಧಿಸಿದಂತೆ ಬಜೆಟ್, ಪ್ಲಾನಿಂಗ್, ಇಂಟೀರಿಯರ್ ಡಿಸೈನ್, ನಿರ್ಮಾಣ ಹಾಗೂ ಮತ್ತಿತರ ಎಲ್ಲ ಸೇವೆಗಳನ್ನೂ ನಾವು ಒದಗಿಸುತ್ತೇವೆ. ಮೈ ಬಿಲ್ಡ್ ಮೂಲಕ ಜನರಿಗೆ ನಾವು ನಮ್ಮ ಗುಣಮಟ್ಟ ಹಾಗೂ ವಿಶಿಷ್ಟತೆಯನ್ನು ಜನರಿಗೆ ಪರಿಚಯಿಸುತ್ತೇವೆ ಎಂಬ ನಂಬಿಕೆ ನಮಗಿದೆʼ ಎನ್ನುತ್ತಾರೆ ಮ್ಯಾನೇಜಿಂಗ್ ಪಾರ್ಟ್‍ನರ್ ಪ್ರತಿಭಾ ನಾಯಕ್ ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು