`ಹುಲಿಧಾಮ’ ಯೋಜನೆಗೆ ರೈತ ಸಂಘಟನೆಗಳ ತೀವ್ರ ವಿರೋದ

-ಶಾರುಕ್ ಖಾನ್, ಹನೂರು

ಹನೂರು : ಕಾಡಂಚಿನ ಗ್ರಾಮಗಳ ಜನರಿಗೆ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ನೀಡದೆ ಸರ್ಕಾರ ಹುಲಿಸಂರಕ್ಷಿತ ಅರಣ್ಯ ಪ್ರದೇಶ ಮಾಡಲು ಹೊರಟಿರುವುದಕ್ಕೆ ನಮ್ಮ ವಿರೋಧವಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘಟನೆಯ ಕೋಳ್ಳೆಗಾಲ ತಾಲ್ಲೂಕು ಅಧ್ಯಕ್ಷ ಗೌಡೇಗೌಡ ತಿಳಿಸಿದರು. 

ಹನೂರು ಪಟ್ಟಣದಲ್ಲಿ ಕರ್ನಾಟಕ ಪತ್ರಕರ್ತರ ಸಂಘದ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು,     ಜೋಸೆಫ್ ಹೂಗಾರ್ ಒಬ್ಬ ಪಟ್ಟಣವಾಸಿ ಅಲ್ಲದೆ, ವ್ಯಾಪಾರಸ್ಥರಾಗಿದ್ದು ಅಂತಹವರು ಹಳ್ಳಿಯ ಕಡೆ ಬಂದು ಜೀವನ ನಡೆಸಲಿ ಆಗ ಮಾತ್ರ ಹುಲಿಧಾಮ ಮಾಡಿಸಲು ನಿರ್ಧಾರ ಮಾಡಲಿ. ಬೆಂಗಳೂರಿನಂತಹ ಸಿಟಿಯಲ್ಲಿ ಕುಳಿತು ಜೀವನ ನಡೆಸಿ ಎಲ್ಲೊ ಕುಳಿತು ಹೋರಾಟ ಮಾಡುವ ಬದಲು, ಕಾಡಂಚಿನ ಜನರ ವಾಸ್ತವ ಸ್ಥಿತಿಯನ್ನು ಅರಿಯಲಿ. ನಂತರ ಸರ್ಕಾರಕ್ಕೆ ಸಲಹೆ ನೀಡಲಿ ಎಂದು ತಿಳಿಸಿದರು. 
ಜಿಲ್ಲಾಧ್ಯಕ್ಷ ಹೆಬ್ಸುರು ಬಸವಣ್ಣ ಮಾತನಾಡಿ, ಹನೂರು ತಾಲ್ಲೂಕು ಕೇಂದ್ರವಾಗಿ ನಾಲ್ಕು ವರ್ಷ ಕಳೆದರೂ ಇನ್ನು ಯಾವುದೇ ಸರ್ಕಾರಿ ಕಛೇರಿಗಳ ಸ್ಥಳಾಂತರವಾಗಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಬಹಳಷ್ಟು ರೈತರು ದಿನ ನಿತ್ಯದ ಕೆಲಸ ಕಾರ್ಯಗಳಿಗೆ ಅಲೆಯುವಂತಾಗಿದೆ. ಸರ್ಕಾರ ಮೊದಲು ಇದನ್ನು ಸರಿಪಡಿಸಲಿ ಎಂದರು.
ಗೌರವ ಅಧ್ಯಕ್ಷ ಶಿವರಾಮು, ಅಮ್ಜದ್ ಖಾನ್, ರವಿನಾಯ್ಕ, ರಾಜಣ್ಣ, ಶಕ್ತಿವೇಲ್, ವೆಂಕಟೇಶ್, ಕಾಂಚಳ್ಳಿ ಬಸವಾರಾಜು ಇನ್ನಿತರರು ಇದ್ದರು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು