ಯುವತಿ ನಾಪತ್ತೆ : ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ನವೆಂಬರ್ 23, 2022
-ಶಿವರಾಜು, ಟಿ.ನರಸೀಪುರ.
ಟಿ.ನರಸೀಪುರ : 22 ವರ್ಷದ ಯುವತಿಯೊಬ್ಬಳು ನಾಪತ್ತೆಯಾಗಿರುವ ಬಗ್ಗೆ ಟಿ.ನರಸೀಪುರ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ರವಿಕುಮಾರ್ ಎಂಬವರ ಮಗಳು ಹರ್ಷಿತ (22) ನಾಪತ್ತೆಯಾದ ಯುವತಿ, 21 ರ ಸಂಜೆ 6 ಗಂಟೆಗೆ ಮನೆ ಬಿಟ್ಟು ಹೋದವಳು ವಾಪಸ್ ಬಂದಿಲ್ಲ. ಎಂದು ನಾಪತ್ತೆಯಾದ ಯುವತಿಯ ತಂದೆ ರವಿಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ. 22 ವರ್ಷದ ಹರ್ಷಿತಾ, ಕೋಲು ಮುಖ ಹೊಂದಿದ್ದು, ಗೋಧಿ ಮಿಶ್ರಿತ ಬಿಳಿ ಬಣ್ಣ, 5.1 ಅಡಿ ಎತ್ತರವಿದ್ದು, ಸಾಧಾರಣ ಮೈಕಟ್ಟು, ಕನ್ನಡ ಭಾμÉ ಬರುತ್ತದೆ. ಮಾಹಿತಿ ತಿಳಿದವರು 0822-7261227 ಕರೆ ಮಾಡಬೇಕೆಂದು ಟಿ.ನರಸೀಪುರ ಟೌನ್ ಪೊಲೀಸರು ಕೋರಿದ್ದಾರೆ.
0 ಕಾಮೆಂಟ್‌ಗಳು