ಅಸ್ವಸ್ಥಗೊಂಡ ಅನಾಥ ವೃದ್ಧೆಯ ನೆರವಿಗೆ ನಿಂತ ಪತ್ರಕರ್ತ, ಪುರಸಭಾ ಸದಸ್ಯ
ನವೆಂಬರ್ 27, 2022
ಹೊಳೆನರಸೀಪುರ : ಪತ್ರಕರ್ತರರೊಬ್ಬರು ತಮ್ಮ ಗೆಳೆಯರ ಜತೆಗೂಡಿ ಅನಾರೋಗ್ಯದಿಂದ ಅಸ್ವಸ್ಥಗೊಂಡ ಅನಾಥ ವೃದ್ಧ ಮಹಿಳೆಯೊಬ್ಬರನ್ನು ಆಸ್ಪತ್ರೆಗೆ ಸೇರಿಸಿ ಆರೈಕೆ ಮಾಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಹೊಳೆನರಸೀಪುರ ಪಟ್ಟಣದ ನರಸಿಂಹ ನಾಯಕ ನಗರದಲ್ಲಿ 20 ವರ್ಷಗಳಿಂದ ಒಂಟಿಯಾಗಿ ವಾಸವಿದ್ದ ವಯೋವೃದ್ಧೆ ನಾರಾಯಣಮ್ಮ ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದುದನ್ನು ಕಂಡ ಪತ್ರಕರ್ತ ಡಿಕೆ ವಸಂತಯ್ಯ ಮತ್ತು ಪುರಸಭಾ ಸದಸ್ಯ ಪ್ರಸನ್ನ ಕುಮಾರ್ ತಡ ಮಾಡದೆ ಅಸ್ವಸ್ಥಗೊಂಡಿದ್ದ ವೃದ್ಧೆಗೆ ತಿನ್ನಲು ಆಹಾರ ನೀಡಿ ಕೂಡಲೇ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲು ನೆರವಾದರು. ಜತೆಗೆ ಆಸ್ಪತ್ರೆಯಲ್ಲಿ ಆಕೆಗೆ ಆರೈಕೆ ಮಾಡಲು ಖಾಸಗಿಯಾಗಿ ಮಹಿಳೆಯೊಬ್ಬರನ್ನು ನೇಮಕ ಮಾಡಿ ವೃದ್ಧೆಯ ಅಗತ್ಯಗಳನ್ನು ಪೊರೈಸಲು ನೆರವಾದುದು ಸಹ ಭಾರಿ ಪ್ರಶಂಸೆಗೆ ಪಾತ್ರವಾಯಿತು.
0 ಕಾಮೆಂಟ್‌ಗಳು