ತೆಳ್ಳನೂರು ಗ್ರಾಮದಲ್ಲಿ ಪವಿತ್ರ ಮೃತ್ತಿಕಾ ಸಂಗ್ರಹಣ ಅಭಿಯಾನ ರಥಯಾತ್ರೆಗೆ ಅದ್ಧೂರಿ ಸ್ವಾಗತ
ನವೆಂಬರ್ 07, 2022
ವರದಿ-ಶಾರುಕ್ ಖಾನ್, ಹನೂರು
ಹನೂರು : ನವ ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರು ಅಪ್ರತಿಮ ಮಾನವತವಾದಿಯಾಗಿದ್ದು, ಸರ್ವಜನಾಂಗದ ಸಮಾನತೆಯ ರಾಜರಾಗಿ ಆಡಳಿತ ನಡೆಸಿದರು ಎಂದು ಕೊಳ್ಳೇಗಾಲ ಮತ್ತು ಯಳಂದೂರು ತಾಲ್ಲೂಕು ಒಕ್ಕಲಿಗರ ಸಂಘದ ನಿರ್ದೇಶಕ ಪ್ರಸನ್ನಕುಮಾರ್ ಹೇಳಿದರು. ಹನೂರು ತಾಲ್ಲೂಕಿನ ತೆಳ್ಳನೂರು ಗ್ರಾಮಕ್ಕೆ ಆಗಮಿಸಿದ ಪವಿತ್ರ ಮೃತ್ತಿಕಾ ಸಂಗ್ರಹಣ ಅಭಿಯಾನ ರಥಯಾತ್ರೆಯನ್ನು ಸ್ವಾಗತಿಸಿ ಅವರು ಮಾತನಾಡಿದರು.
ಕೆಂಪೇಗೌಡರಂತಹ ನಾಡದೊರೆಯ ಪುತ್ತಳಿ ನಿರ್ಮಾಣಕ್ಕೆ ನಾಡಿನಾದ್ಯಂತ ಪವಿತ್ರ ಮೃತ್ತಿಕಾ ಸಂಗ್ರಹಣ ಅಭಿಯಾನ ನಡೆಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯ ಎಂದು ಹರ್ಷ ವ್ಯಕ್ತಪಡಿಸಿದರು. ಚಾಮರಾಜನಗರ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದತ್ತೇಶ್ ಕುಮಾರ್ ಸೇರಿದಂತೆ ಗ್ರಾಮದ ಮುಖಂಡರು ಪಕ್ಷಭೇದ ಮರೆತು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಂತರ ರಥವು ಹನೂರು ಸುತ್ತ ಮುತ್ತಲಿನ ಗ್ರಾಮಗಳಾದ ಚಿಕ್ಕಲ್ಲೂರು, ಕಾಮಗೆರೆ, ಶ್ಯಾಗ್ಯ ಮುಂತಾದ ಕಡೆ ಸಂಚರಿಸಿತು.
0 ಕಾಮೆಂಟ್‌ಗಳು