ಕಾಡಾನೆಗಳ ದಾಳಿ: ಅಪಾರ ಪ್ರಮಾಣದ ಬೆಳೆ‌ ನಾಶ

-ಶಾರುಕ್ ಖಾನ್, ಹನೂರು.

ಪಟ್ಟಣದ ಎತ್ತಿನ ಗುಡ್ಡೆ ಅರಣ್ಯ ಪ್ರದೇಶ ವ್ಯಾಪ್ತಿಯ ಒಂಟಿ ಮಾಲಪುರ ವ್ಯಾಪ್ತಿಯಲ್ಲಿ‌ ಕಾಡನೆಗಳ ಹಾವಳಿ ವಿಪರೀತವಾಗಿದ್ದು, ಅಪಾರ ಫಸಲು ನಾಶವಾಗಿ, ರೈತರು ಕಂಗಲಾಗಿದ್ದಾರೆ.
ಒಂಟಿಮಾಲಾಪುರದ ಕೃಷ್ಣೇಗೌಡರ  ತೋಟಕ್ಕೆ ನಿನ್ನೆ ರಾತ್ರಿ ನುಗ್ಗಿದ ಕಾಡಾನೆಗಳು ತೋಟದಲ್ಲಿ ಬೆಳದಿದ್ದ ಬಾಳೆ, ತೆಂಗು, ಅರಿಶಿಣ, ಜೋಳದ ಫಸಲನ್ನು  ನಾಶಪಡಿಸಿವೆ. 
ಕೈಗೆ ಬಂದ ಬೆಳೆಗಳು  ಆನೆಗಳ ದಾಳಿಯಿಂದ ಅಪಾರ ಪ್ರಮಾಣದಲ್ಲಿ‌ ನಾಶವಾಗಿದ್ದು, ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸಿಲ್ಲ. ಇದರಿಂದ ಜೀವನ ನಿರ್ವಹಣೆ ಕಷ್ಟವಾಗಿದೆ ಎಂದು‌ ನೊಂದ  ರೈತ  ಅಳಲು ತೊಡಿಕೊಂಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು