ಸ್ನೇಹಿತನಿಂದಲೇ ದೊಡ್ಡರಸಿನಕೆರೆ ರೌಡಿಶೀಟರ್ ``ಕಪ್ಪೆ’’ ಹತ್ಯೆ

-ಟಿ.ಬಿ.ಸಂತೋಷ, ಮದ್ದೂರು 

ಮದ್ದೂರು : ಹಣಕಾಸಿನ ವಿಷಯಕ್ಕೆ ರೌಡಿಶೀಟರ್ ಗಳ ನಡುವೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಮದ್ದೂರು ತಾಲೂಕಿನ ದೊಡ್ಡರಸಿನಕೆರೆ ಗ್ರಾಮದಲ್ಲಿ ಜರುಗಿದೆ. 
ದೊಡ್ಡರಸಿಕೆರೆ ಗ್ರಾಮದ ರಮೇಶ್ ಎಂಬುವರ ಪುತ್ರ ಅರುಣ್ ಅಲಿಯಾಸ್ ಕಪ್ಪೆ (23) ಮೃತ ರೌಡಿಶೀಟರ್.
ದೊಡ್ಡರಸಿಕೆರೆ ಗ್ರಾಮದ ರೌಡಿಶೀಟರ್ ಗಳಾದ ಅರುಣ್ ಅಲಿಯಾಸ್ ಕಪ್ಪೆ ಮತ್ತು ದೊಡ್ಡಯ್ಯ ಹಾಗೂ ದೇವರಾಜು ಎಂಬುವವರಿಗೆ ಹಣಕಾಸಿನ ವಿಚಾರಕ್ಕೆ ದೊಡ್ಡರಸಿಕೆರೆ ವಿ.ಎಸ್.ಎಸ್.ಎನ್ ಮುಂಭಾಗ  ಭಾನುವಾರ ರಾತ್ರಿ ಮಾತಿನ ಚಕಮಕಿ ಏರ್ಪಟ್ಟಿ ಗಲಾಟೆ ನಡೆದು ಹೊಡೆದಾಟ ನಡೆದಿದೆ. 
ಹೊಡೆದಾಟದಲ್ಲಿ ಅರುಣ್ ಅಲಿಯಾಸ್ ಕಪ್ಪೆ ಎಂಬುವವರಿಗೆ  ದೊಡ್ಡಯ್ಯ ಹಾಗೂ ದೇವರಾಜು  ಎಂಬುವವರು ತೀವ್ರವಾಗಿ ಥಳಿಸಿದ್ದಾರೆ ಈ ಸಂದರ್ಭದಲ್ಲಿ ಅರುಣ್ ಮೂಗಿಗೆ ಬಲವಾಗಿ ಪೆಟ್ಟಾಗಿ ರಕ್ತಸ್ರಾವ ಉಂಟಾಗಿ ಚಿಕಿತ್ಸೆಗಾಗಿ ದೇವರಹಳ್ಳಿ ಮಾರ್ಗದಲ್ಲಿ ಕೆ.ಎಂ ದೊಡ್ಡಿ ಆಸ್ಪತ್ರೆಗೆ ಕರೆದುಕೊಂಡು ಹೋಗುತಿದ್ದಾಗ ಹಿಂಬಾಲಿಸಿ ಬಂದ ದೊಡ್ಡಯ್ಯ, ದೇವರಾಜ ಹಾಗೂ ಆತನ ಸಹಚರರು ದೊಣ್ಣೆ ಹಾಗೂ ಕಲ್ಲಿನಿಂದ ಅರುಣ್‍ನ ಮೇಲೆ ಮಾರಣಾಂತಿಕವಾಗಿ ತಲೆಯ ಮೇಲೆ  ಹಲ್ಲೆ ನಡೆಸಿದರು. ಮಾರಣಾಂತಿಕವಾಗಿ ಹಲ್ಲೆಗೆ ಒಳಗಾಗಿದ್ದ ಅರುಣ್ ನನ್ನು ಕೆ.ಎಂ.ದೊಡ್ಡಿಯ ಜಿ.ಮಾದೇಗೌಡ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಯಿತು.  ಸೋಮವಾರ ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ  ಅರುಣ್ ಸಾವನ್ನಪ್ಪಿದನು. ಅರುಣ್ ಮೃತ ದೇಹವನ್ನು ಮೈಸೂರಿನ ಕೆ.ಆರ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ತರಲಾಗಿದೆ. 
  ಅರುಣ್ ಕೊಲೆ ಹಿನ್ನಲೆಯಲ್ಲಿ ದೊಡ್ಡರಸಿನಕೆರೆ ಗ್ರಾಮದಲ್ಲಿ ಪ್ರಕ್ಷ್ಯಬ್ದ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ. ಈ ಸಂಬಂಧ
ಕೆ.ಎಂ. ದೊಡ್ಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಘಟನಾ ಸ್ಥಳಕ್ಕೆ ಎಸ್‍ಪಿ ಎನ್. ಯತೀಶ್, ಅಪರ ಪೊಲೀಸ್ ವರಿμÁ್ಠಧಿಕಾರಿ ವೇಣುಗೋಪಾಲ್, ಮಳವಳ್ಳಿ ಉಪ ವಿಭಾಗದ ಡಿವೈಎಸ್ಪಿ ನವೀನ್ ಭೇಟಿ ನೀಡಿದ್ದರು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು