ಜಿಲ್ಲಾದ್ಯಂತ ಸಹಕಾರ ಸಂಸ್ಥೆಗಳ ಬೆಳವಣಿಗೆ ಮತ್ತು ಮುಂದಿನ ಭವಿಷ್ಯ ಕುರಿತಂತೆ ನಾಳೆಯಿಂದ ಅಖಿಲ ಭಾರತ ಸಹಕಾರ ಸಪ್ತಾಹ : ಹೆಚ್.ವಿ.ರಾಜೀವ್
ನವೆಂಬರ್ 13, 2022
ಮೈಸೂರು : ಇದೇ ನವೆಂಬರ್ 14 ರ ಸೋಮವಾರದಿಂದ ನ.20 ರವರೆಗೆ ಜಿಲ್ಲಾದ್ಯಂತ ಸಹಕಾರ ಸಂಸ್ಥೆಗಳ ಬೆಳವಣಿಗೆ ಮತ್ತು ಮುಂದಿನ ಭವಿಷ್ಯ ವಿಷಯ ಕುರಿತಂತೆ ಅಖಿಲ ಭಾರತ ಸಹಕಾರ ಸಪ್ತಾಹ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷರಾದ ಎಚ್.ವಿ. ರಾಜೀವ್ ತಿಳಿಸಿದರು. ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನ. 14 ರಂದು ನಗರದ ಚಾಮರಾಜ ಜೋಡಿ ರಸ್ತೆಯ ಸಹಕಾರ ಭವನದಲ್ಲಿ ಸಹಕಾರ ಸಂಸ್ಥೆಗಳಲ್ಲಿ ವ್ಯಾಪಾರ ಸರಳೀಕರಣ, ರಫ್ತು ವೃದ್ಧಿಗಾಗಿ ಜೆಮ್- ಪೋರ್ಟಲ್ ಬಳಕೆ ಕುರಿತ ಕಾರ್ಯಕ್ರಮ, 15 ರಂದು ಟಿ. ನರಸೀಪುರ ತಾಲೂಕು ಯಾಚೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಸಹಕಾರ ಮಾರುಕಟ್ಟೆ, ಗ್ರಾಹಕ, ರೂಪಾಂತರ ಮತ್ತು ಮೌಲ್ಯವರ್ಧನೆ ಕುರಿತ ಕಾರ್ಯಕ್ರಮ ನಡೆಯಲಿದೆ.
16 ರಂದು ಎಚ್.ಡಿ. ಕೋಟೆ ತಾಲೂಕು ಸಹಕಾರ ಶಿಕ್ಷಣ, ವೃತ್ತಿಪರ ನಿರ್ವಹಣೆಯನ್ನು ಮುಖ್ಯವಾಹಿನಿಗೆ ತರಲು ಪುನರ್ ನಿರ್ಮಿಸುವುದು, 17 ರಂದು ಹುಣಸೂರು ತಾಲೂಕು ಮನುಗನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಆವಿμÁ್ಕರ ಪೋಷಣೆ, ಸ್ಟಾರ್ಟ್ ಅಪ್‍ಗಳಿಗೆ ಉತ್ತೇಜನ ಮತ್ತು ತಂತಜ್ಞಾನದ ಉನ್ನತೀಕರಣ ಸಹಕಾರ ಸಂಸ್ಥೆಗಳ ಪಾತ್ರ, 18 ರಂದು ಕೆ.ಆರ್. ನಗರ ತಾಲೂಕಿನ ಎಚ್.ಡಿ. ದೇವೇಗೌಡ ಸಮುದಾಯ ಭವನದಲ್ಲಿ ಉದ್ಯಮಶೀಲತೆ ಅಭಿವೃದ್ಧಿ, ಸಾರ್ವಜನಿಕ- ಖಾಸಗಿ- ಸಹಕಾರಿ ಸಹಭಾಗಿತ್ವವನ್ನು ಬಲಗೊಳಿಸುವ ವಿಷಯ ಕುರಿತ ಕಾರ್ಯಕ್ರಮ ನಡೆಯಲಿದೆ. 19 ರಂದು ಯುವಜನ, ಮಹಿಳೆ, ಅಬಲ ವರ್ಗ ಮತ್ತು ಆರೋಗ್ಯಕ್ಕಾಗಿ ಸಹಕಾರ ಸಂಸ್ಥೆ, 20 ರಂದು ನಗರದ ಕರ್ನಾಟಕ ರಾಜ್ಯ ಮುಕ್ತ ವಿವಿ ಘಟಿಕೋತ್ಸವ ಭವನದಲ್ಲಿ ಆರ್ಥಿಕ ಸೇರ್ಪಡೆ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಸ್ಥೆಗಳ ಡಿಜಿಟಲೀಕರಣ ಮತ್ತು ಸಹಕಾರ ಸಂಸ್ಥೆಗಳ ದತ್ತಾಂಶವನ್ನು ಬಲಪಡಿಸುವ ವಿಷಯ ಕುರಿತಂತೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು. ಅಲ್ಲದೆ, ಸರ್ಕಾರ ಮತ್ತೇ ಯಶಸ್ವಿನಿ ಯೋಜನೆ ಜಾರಿಗೊಳಿಸುತ್ತಿರುವುದರಿಂದಾಗಿ ಎಲ್ಲರೂ ಪ್ರಯೋಜನ ಪಡೆಯಬೇಕೆಂದು ಮನವಿ ಮಾಡಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಮಂಜೇಗೌಡ, ಇನ್ನಿತರ ಸಹಕಾರಿ ಮುಖಂಡರಾದ ಸದಾನಂದ್, ಮಹದೇವಸ್ವಾಮಿ, ಭೈರಪ್ಪ, ಸಿದ್ದೇಗೌಡ ಹಾಜರಿದ್ದರು.
0 ಕಾಮೆಂಟ್‌ಗಳು