ಮಹಾರಾಷ್ಟ್ರ ಗಡಿಯಲ್ಲಿನ ಕನ್ನಡಿಗರಿಗೆ ಕಿರುಕುಳ ನೀಡಿದರೆ, ಬೆಳಗಾವಿಯಿಂದ ಮರಾಠಿಗರನ್ನು ಓಡಿಸಬೇಕಾಗುತ್ತದೆ : ಎಚ್ಚರಿಕೆ ನೀಡಿದ ಚಂದುಗಾಲು ಶಿವಣ್ಣ
ನವೆಂಬರ್ 27, 2022
ವರದಿ-ಅಂತನಹಳ್ಳಿ ಬಾಲಕೃಷ್ಣ, ಮಂಡ್ಯ
ಮಂಡ್ಯ : ಮಹಾರಾಷ್ಟ್ರ ಗಡಿಯಲ್ಲಿರುವ ಕನ್ನಡಿಗರ ಮೇಲಿನ ಮರಾಠಿಗರ ದೌರ್ಜನ್ಯವನ್ನು ನಾವು ಎಂದಿಗೂ ಸಹಿಸುವುದಿಲ್ಲ ಎಂದು ಬಿಜೆಪಿ ಮುಖಂಡ ಚಂದುಗಾಲು ಶಿವಣ್ಣ ಹೇಳಿದರು. ಪಟ್ಟಣದ ಹರ್ಡಿಕರ್ ಭವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ವೀರ ಕನ್ನಡಿಗರ ಘರ್ಜನೆ ಮಂಡ್ಯ ಜಿಲ್ಲಾ ಘಟಕದ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ `ಕನ್ನಡ ಉತ್ಸವ’ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಮಹಾರಾಷ್ಟ್ರ ರಾಜ್ಯದ ಗಡಿಯಲ್ಲಿ ವಾಸಿಸುತ್ತಿರುವ ಕನ್ನಡಿಗರು ಎಲ್ಲೆಲ್ಲಿರುವರೋ ಅಲ್ಲಿಯೇ ಬಂದು ಕನ್ನಡಪರ ಸಂಘಟನೆಗಳ ಜತೆಗೂಡಿ ಹೋರಾಟ ನಡೆಸಬೇಕಾಗುತ್ತದೆ. ಇದು ಹೀಗೆ ಮುಂದುವರಿದರೆ, ಬೆಳಗಾವಿಯಲ್ಲಿರುವ ಮರಾಠಿಗರನ್ನು ನಮ್ಮ ರಾಜ್ಯದಿಂದ ಓಡಿಸುವ ಕೆಲಸ ಮಾಡಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು. ಇದೇ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು. ಜಿಲ್ಲಾಧ್ಯಕ್ಷ ಎಂ.ಸಿ.ನವೀನ್, ಉಪಾಧ್ಯಕ್ಷ ಸಿದ್ದರಾಜು, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಆರಾಧ್ಯ, ಮಹಿಳಾ ಸಂಘಟಕಿ ವೀಣಾ, ಕರವೇ ಸಂಸ್ಥಾಪಕ ಮಂಜುನಾಥ್ ಕೆ, ರಾಜ್ಯಾಧ್ಯಕ್ಷ ಎನ್ ಗಣೇಶ್, ಗೌರವಾಧ್ಯಕ್ಷ ಅಬುಬಕ್ಕರ್, ಜಿಲ್ಲಾ ಗೌರವಾಧ್ಯಕ್ಷ ರವಿ, ಸಾಹಿತಿ ಟಿ. ಸತೀಶ್ ಜವರೇಗೌಡ, ಶಿವಶರಣ ನಾಗರಾಜ್ , ಪದಾಧಿಕಾರಿಗಳಾದ ರಾಜು, ಶ್ರೀನಿವಾಸ್, ಮುನಿರಾಜು ಮತ್ತಿತರರು ಇದ್ದರು.
0 ಕಾಮೆಂಟ್‌ಗಳು