ಪಾಂಡವಪುರ : ತಮ್ಮ ಮಕ್ಕಳ ಭವಿಷ್ಯ ರೂಪಿಸುವ ಬಗ್ಗೆ ಪೋಷಕರು ಕಾಳಜಿ ತೆಗೆದುಕೊಳ್ಳದೇ ತೀವ್ರ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾರೋಹಳ್ಳಿ ಧನ್ಯಕುಮಾರ್ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಹಾರೋಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ನೆಹರು ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಕ್ಕಳ ಸಾಂಸ್ಕøತಿಕ ಕಾರ್ಯಕ್ರಮಗಳ ವೀಕ್ಷಣೆಗೆ ಪೋಷಕರು ಬಾರದಿರುವುದು ಮಕ್ಕಳ ಭವಿಷ್ಯದ ಬಗ್ಗೆ ಎಷ್ಟು ಕಾಳಜಿ ಹೊಂದಿದ್ದಾರೆ ಎಂಬುದು ತಿಳಿಯುತ್ತದೆ. ಕಾನ್ವೆಂಟ್ ವ್ಯಾಮೋಹವನ್ನು ಹೊಂದಿರುವ ಪೋಷಕರು ತಮ್ಮ ಮಕ್ಕಳು ಮಮ್ಮಿ ಡ್ಯಾಡಿ ಎನ್ನುವ ಬಯಕೆ ಹೊಂದಿದ್ದಾರೆ. ಮಮ್ಮಿ ಎನಿಸಿಕೊಳ್ಳುವುದೇ ಅವರಿಗೆ ದೊಡ್ಡ ಗೌರವವಾಗಿದೆ. ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸುವ ಕನ್ನಡ ಸರ್ಕಾರಿಗಳು ಪೋಷಕರಿಗೆ ಬೇಡವಾಗಿದೆ. ತಾಯಿ ಭಾμÉ ಕನ್ನಡವನ್ನು ಎಲ್ಲರೂ ಪ್ರೀತಿಸಬೇಕು ಎಂದರು.
ಗಮನಸೆಳೆದ ಮಕ್ಕಳು : ಮಕ್ಕಳ ದಿನಾಚರಣೆಯ ಪ್ರಯುಕ್ತ ವಿವಿಧ ವೇಷಧಾರಿಗಳಾಗಿ ಆಗಮಿಸಿದ ಶಾಲೆಯ ಮಕ್ಕಳು ಗಮನಸೆಳೆದರು. ಜತೆಗೆ 7ನೇ ತರಗತಿಯ ವಿದ್ಯಾರ್ಥಿಗಳಾದ ಸುರಭಿ ಹಾಗೂ ಜೀವನ್ (ಅಪ್ಪು) ಅವರುಗಳು ನೆಹರು ಕುರಿತು ಭಾಷಣ ಮಾಡುವ ಮೂಲಕ ಎಲ್ಲರ ಗಮನಸೆಳೆದರು. ಚಿರಂಜೀವಿ ಸ್ವಾಗತ ಹಾಗೂ ನಿರೂಪಣೆ ಮಾಡಿದರೆ, ಇನ್ನೂ ಕೆಲವು ಮಕ್ಕಳು ನೃತ್ಯ, ಹಾಡು, ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನೀಡುವ ಮೂಲಕ ಗಮನಸೆಳೆದು ಗಣ್ಯರ ಮೆಚ್ಚುಗೆಗೆ ಪಾತ್ರರಾದರು.
ಈ ವೇಳೆ ಮಂಡ್ಯ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಅಶ್ವತ್ಥನಾರಾಯಣ, ಕನ್ನಡಪರ ಹೋರಾಟಗಾರ ಕೋ.ಪು.ಗುಣಶೇಖರ್, ಪತ್ರಕರ್ತ ಎನ್.ಕೃಷ್ಣೇಗೌಡ, ಮುಖ್ಯ ಶಿಕ್ಷಕ ಚಿದಾನಂದ, ಸಹ ಶಿಕ್ಷಕರಾದ ಸುವರ್ಣ, ಸವಿತಾ, ಅತಿಥಿ ಶಿಕ್ಷಕಿ ಲೀಲಾ ಪ್ರಭಾಕರ್ ಹಾಗೂ ಅಡುಗೆ ಸಿಬ್ಬಂದಿ, ಪೋಷಕರು ಇತರರಿದ್ದರು.
ಹಾರೋಹಳ್ಳಿ ಶಾಲೆ ಅಭಿವೃದ್ಧಿಗೆ ಶಾಲೆ ದತ್ತು ತೆಗೆದುಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಜನಹಿತ ಸಮಿತಿ ರಾಜ್ಯಾಧ್ಯಕ್ಷ ಗಿರೀಶ್‍ಗೌಡ ಅವರು ಆಶಯ ವ್ಯಕ್ತಪಡಿಸಿದ್ದಾರೆ. ನಾವು ಈ ಹಿಂದೆಯೇ ಶಾಲೆ ಅಭಿವೃದ್ಧಿಗೆ ಸಮಿತಿ ರಚಿಸಿ ಚರ್ಚೆ ನಡೆಸಿದ್ದೇವು. ಆದರೆ ಅದು ಸಫಲವಾಗಲಿಲ್ಲ. ಇದೀಗ ಗಿರೀಶ್‍ಗೌಡ ಅವರು ಶಾಲೆ ಅಭಿವೃದ್ಧಿ ಮಾಡುವುದಾಗಿ ಮುಂದೆ ಬಂದಿರುವುದು ಆಶಾದಾಯಕ ಬೆಳವಣಿಗೆ ಎಂದರು.
0 ಕಾಮೆಂಟ್‌ಗಳು