ಚಾಮರಾಜನಗರ : ಸುದ್ದಿನಾಡು ಯೂಟ್ಯೂಬ್ ಚಾನಲ್ ಸಂಪಾದಕ, ಹಿರಿಯ ಪತ್ರಕರ್ತ ರಹಮಾನ್ (45) ಇಂದು ಮದ್ಯಾಹ್ನ ಬನ್ನೂರು ಬಳಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಚಾಮರಾಜನಗರ ತಾಲ್ಲೂಕು ಹರದನಹಳ್ಳಿ ಗ್ರಾಮದ ವಾಸಿಯಾದ ರಹಮಾನ್ ಇಂದು ಮದ್ಯಾಹ್ನ ಬನ್ನೂರು ಬಳಿ ಚಿತ್ರೀಕರಣ ನಡೆಯುತ್ತಿದ್ದ ಚಲನ ಚಿತ್ರವೊಂದರ ಸುದ್ದಿ ಸಂಗ್ರಹಕ್ಕೆ ಹೋಗುತ್ತಿದ್ದ ವೇಳೆ, ಬನ್ನೂರು ಸಮೀಪದ ಬೀಡನಹಳ್ಳಿ ಬಳಿ ರಸ್ತೆ ಬದಿ ಬೈಕ್ ನಿಲ್ಲಿಸಿ ಶೌಚಾಲಯಕ್ಕೆ ಹೋಗಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಬುಧವಾರ ಸಂಜೆ ರಹಮಾನ್ ಜಮೀನೊಂದರಲ್ಲಿ ಮೃತಪಟ್ಟಿರುವುದನ್ನು ನೋಡಿದ ಗ್ರಾಮಸ್ಥರು ಪೊಲೀಸರಿಗೆ ಸುದ್ದಿ ಮುಟ್ಟಿಸಿದರು ಎನ್ನಲಾಗಿದೆ. ರಹಮಾನ್ ಈ ಹಿಂದೆ ಹಲವಾರು ದೃಶ್ಯ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದರು. ಮೃತರಿಗೆ ಪತ್ನಿ ಮತ್ತು ಇಬ್ಬರು ಮಕ್ಕಳು ಇದ್ದಾರೆ.
0 ಕಾಮೆಂಟ್‌ಗಳು