ಕನ್ನಿಕಾ ಕಾವೇರಿ ಎಜುಕೇಷನ್ ಸೊಸೈಟಿಯಲ್ಲಿ ಮೂರು ದಿನಗಳ ವಿಜ್ಞಾನ ಪ್ರದರ್ಶನ ಹಾಗೂ ಕಲಾ ಮೇಳ ಆರಂಭ
ನವೆಂಬರ್ 10, 2022
ಮೈಸೂರು : ನಗರದ ಹೆಬ್ಬಾಳಿನಲ್ಲಿರುವ ಕನ್ನಿಕಾ ಕಾವೇರಿ ಎಜುಕೇಷನ್ ಸೊಸೈಟಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ವಿಜ್ಞಾನ ಪ್ರದರ್ಶನ ಮತ್ತು ಕಲಾ ಮೇಳಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಎಂ.ಸಿ.ಚೊಂಡಮ್ಮ ಅವರು ಮಾತನಾಡಿ, ಸಂಸ್ಥೆಯು 34 ವರ್ಷದಿಂದ ಈ ಭಾಗದ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸೇವೆ ನೀಡುತ್ತಿದೆ. ನಮ್ಮ ಶಾಲೆಯಲ್ಲಿ ಕಳೆದ 15 ವಷಗಳಿಂದ ವಿಜ್ಞಾನ ಪ್ರದರ್ಶನ ಮತ್ತು ಕಲಾ ಮೇಳ ನಡೆಸುತ್ತಿದ್ದೇವೆ. ಕರೋನಾ ಕಾರಣದಿಂದ ಕಳೆದ ಎರಡು ವರ್ಷಗಳು ನಡೆಸಲು ಆಗಲಿಲ್ಲ ಎಂದರು.
ವಿಧ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಮೂಡಿಸಲು ಅವರಿಗೆ ಯಾವುದೇ ರೀತಿಯ ಹೊರೆಯಾಗದಂತೆ ಬಹುತೇಕ ತ್ಯಾಜ್ಯ ವಸ್ತುಗಳನ್ನು ಬಳಸಿಕೊಂಡು ವೈಜ್ಞಾನಿಕ ಅವಿಷ್ಕಾರಗಳು ಮತ್ತು ಪ್ರದರ್ಶನಗಳನ್ನು ನಡೆಸುತ್ತಿದ್ದೇವೆ, ಇದನ್ನು ವಿದ್ಯಾರ್ಥಿಗಳೇ ತಯಾರಿಸುವುದು ವಿಶೇಷವಾಗಿದೆ ಎಂದರು. ಶಾಲೆಯಲ್ಲಿ ಮಕ್ಕಳ ಶಿಕ್ಷಣಕ್ಕೆ ಯಾವುದೇ ರೀತಿಯಲ್ಲಿ ಹೊರೆಯಾಗದಂತೆ ಕಡಿಮೆ ಶುಲ್ಕ ಪಡೆದು ಶಿಕ್ಷಣ ನೀಡುತ್ತಿದ್ದೇವೆ. ವಿಶೇಷ ಸಂದರ್ಭದಲ್ಲಿ ಬಡ ಮಕ್ಕಳಿಗೆ ಉಚಿತವಾಗಿಯೂ ಶಿಕ್ಷಣ ನೀಡಲಾಗುವುದು. ಈ ರೀತಿ ನಮ್ಮಲ್ಲಿ ಉಚಿತವಾಗಿ ಶಿಕ್ಷಣ ಪಡೆದ 200ಕ್ಕೂ ಹೆಚ್ಚು ಮಕ್ಕಳು ಇಂದು ಉನ್ನತ ವಿದ್ಯಾಭ್ಯಾಸ ಪಡೆದು ವಿವಿಧ ಹುದ್ದೆಗಳಲ್ಲಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು ಹಾಜರಿದ್ದರು.
0 ಕಾಮೆಂಟ್‌ಗಳು