ಲೊಕ್ಕನಹಳ್ಳಿಯಲ್ಲಿ ಸಿದ್ದಪ್ಪಾಜಿ ಜಾತ್ರೆ : ಕುದಿಯುವ ಎಣ್ಣೆಗೆ ಕೈ ಹಾಕಿ ಕಜ್ಜಾಯ ತೆಗೆದ ಅರ್ಚಕ ಸಿದ್ದರಾಜು

 -ಶಾರುಕ್ ಖಾನ್, ಹನೂರು

ಹನೂರು : ಕಡೇ ಕಾರ್ತಿಕ ಸೋಮುವಾರದ ಪ್ರಯುಕ್ತ ತಾಲ್ಲೂಕಿನ ಲೊಕ್ಕನಹಳ್ಳಿಯಲ್ಲಿ ನಡೆದ ಸಿದ್ದಪ್ಪಾಜೀ ಜಾತ್ರೆಯಲ್ಲಿ ಅರ್ಚಕ ಸಿದ್ದರಾಜು ಕುದಿಯುವ ಎಣ್ಣೆಗೆ ಕೈ ಹಾಕಿ ಕಜ್ಜಾಯ ತೆಗೆದ ಮೈನವಿರೇಳಿಸುವ ದೃಶ್ಯವನ್ನು ನೋಡುವ ಮೂಲಕ ಸಾವಿರಾರು ಭಕ್ತರು ಘಟನೆಗೆ ಸಾಕ್ಷಿಯಾದರು.
ತಾಲ್ಲೂಕಿನ ಲೊಕ್ಕನಹಳ್ಳಿಯಲ್ಲಿ ಪ್ರತಿ ವರ್ಷ ಕಾರ್ತಿಕ ಮಾಸದ ಕೊನೆಯ ಸೋಮವಾರ ನಡೆಯುವ ಸಿದ್ದಪ್ಪಾಜಿಯ ಜಾತ್ರೆಗೆ ಸುತ್ತ ಮುತ್ತಲಿನ ಗ್ರಾಮದ ಸಾವಿರಾರು ಜನರು ಸೇರಿದ್ದರು. ಈ ವೇಳೆ ಭಕ್ತರ ಸಮ್ಮುಖದಲ್ಲಿ ಅರ್ಚಕರು ಕುದಿಯುವ ಎಣ್ಣೆಗೆ ಕೈ ಹಾಕುತ್ತಾರೆ. ಬರಿಗೈಯಲ್ಲಿಯೇ ಬಿಸಿ ಬಿಸಿ ಕಜ್ಜಾಯ ತೆಗೆಯುತ್ತಾರೆ. ಅರ್ಚಕರ ಮೇಲೆ ಸಿದ್ದಾಪ್ಪಾಜ್ಜಿ ಬರುತ್ತಾರೆ ಎಂದು ನಂಬಿರುವ ಭಕ್ತರು ಈ ದೃಶ್ಯವನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿವುದನ್ನು ಕಾಣಬಹುದಾಗಿದೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು