ಮೈಸೂರಿನಲ್ಲಿ ``ಜನನ ದೋಷಗಳು’’ ಕುರಿತ 5ನೇ ಅಂತಾರಾಷ್ಟ್ರೀಯ ಸಮ್ಮೇಳನ : ``ಜನನ ದೋಷಗಳಿಗೆ ನಿಖರವಾದ ಔಷಧ’’ ವಿಷಯ ಕುರಿತ ಸಂವಾದ

ಮೈಸೂರು : ಬಹುತೇಕ ಎಲ್ಲಾ ವೈದ್ಯರು ತಮ್ಮಲ್ಲಿ ಬರುವ ಯಾವುದೇ ರೋಗಿಗೆ ಲಭ್ಯವಿರುವ ಅತ್ಯಾಧುನಿಕ ವೈದ್ದಯಕೀಯ ತಂತ್ರಜ್ಞಾನ ಬಳಸಿ ಉತ್ಕøಷ್ಟವಾದ ಚಿಕಿತ್ಸೆ ಮತ್ತು ಸಲಹೆಯನ್ನೇ ಕೊಡುವ ಗುರಿಯನ್ನು ಹೊಂದಿರುತ್ತಾರೆ ಎಂದು ಲಂಡನ್ ಜಿನೋಮಿಕ್ ಫೌಂಡೇಷನ್ ಮೆಡಿಕಲ್ ಸೈರೆಕ್ಟರ್ ಡಾ.ಧವೇಂದ್ರ ಕುಮಾರ್ ಹೇಳಿದರು.
ನಗರದ ಜೆಎಸ್‍ಎಸ್ ಮೆಡಿಕಲ್ ಕಾಲೇಜಿನ ಶ್ರೀ ರಾಜೇಂದ್ರ ಸಭಾಂಗಣದಲ್ಲಿ ಜೆಎಸ್‍ಎಸ್ ಉನ್ನತ ಶಿಕ್ಷಣ ಅಕಾಡೆಮಿ ಏರ್ಪಡಿಸಿದ್ದ ಜನನ ದೋಷಗಳು ಕುರಿತ 5ನೇ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ 
ಜನನ ದೋಷಗಳಿಗೆ ನಿಖರವಾದ ಔಷಧ ವಿಷಯ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.
ಒಬ್ಬ ರೋಗಿಯ ಚಿಕಿತ್ಸೆಗೂ ಆತನ ರೋಗವನ್ನು ನಿರ್ಣಯ ಮಾಡುವುದು ಪ್ರಮುಖವಾದ ಘಟ್ಟ. ಈ ಸಮಯದಲ್ಲಿ ರೋಗಿಯ ವಂಶಪಾರಂಪರ್ಯ ಶಾರೀರಿಕ ವಿಚಾರಗಳ ಅಧ್ಯಯನ ನಡೆಸಿ ಹೆಚ್ಚಿನ ದಕ್ಷತೆ ಮತ್ತು ಪರಿಣಾಮಕಾರಿ ಔಷಧಗಳನ್ನು ನೀಡುವುದು ಮುಖ್ಯವಾ ಗಿರುತ್ತವೆ ಎಂದರು. 
ಸಮ್ಮೇಳನದಲ್ಲಿ ಜೆಎಸ್‍ಎಸ್ ಮೆಡಿಕಲ್ ಕಾಲೇಜಿನ ಡೀನ್ ಡಾ.ಎಚ್.ಬಸವನಗೌಡಪ್ಪ, ಡಾ.ಪ್ರಶಾಂತ್ ವಿಶ್ವನಾಥ್, ಡಾ.ವಿಶಾಲ್ ಕುಮಾರ್ ಗುಪ್ತಾ ಮುಂತಾದವರು ಭಾಗವಹಿಸಿ ಉಪನ್ಯಾಸ ನೀಡಿದರು.



 
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು