ಕಾಲೇಜು ಮುಗಿಸಿ ಮನೆಗೆ ಹೋಗುತ್ತಿದ್ದ ವಿಧ್ಯಾರ್ಥಿನಿಯ ಮೇಲೆ ಕ್ರೇನ್ ಹರಿದು ಸ್ಥಳದಲ್ಲೇ ದಾರುಣ ಸಾವು

ಆನೇಕಲ್ : ಕ್ರೇನ್ ಹರಿದು ವಿದ್ಯಾರ್ಥಿನಿಯೊಬ್ಬಳು ದಾರುಣವಾಗಿ ಸಾವಿಗೀಡಾದ ಘಟನೆ ಮಹದೇವಪುರ ಕ್ಷೇತ್ರದ ಕನ್ನಮಂಗಲ ಗೇಟ್ ಬಳಿಯ ಜೈನ್ ಶಾಲೆ ಹತ್ತಿರ ಇಂದು ಮದ್ಯಾಹ್ನ ನಡೆದಿದೆ.
ನೂರ್ ಫಿಝಾ (19) ಮೃತ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ.
ಈಕೆ ಶಾಲೆ ಮುಗಿಸಿಕೊಂಡು ಮಹದೇವಪುರ ಕ್ಷೇತ್ರದ ವೈಟ್ ಫೀಲ್ಡ್ – ಹೊಸಕೋಟೆ ಮಾರ್ಗವಾಗಿ ಕನ್ನಮಂಗಲ ಬಳಿ ಹೋಗುತ್ತಿದ್ದಾಗ ಹಿಂಬದಿಯಿಂದ ಬಂದು ಕ್ರೇನ್ ವಿಧ್ಯಾರ್ಥಿನಿಗೆ ಗುದ್ದಿದೆ. ನಂತರ ರಸ್ತೆಯಲ್ಲಿ ಬಿದ್ದ ವಿದ್ಯಾರ್ಥಿನಿಯ ಮೇಲೆಯೂ ಕ್ರೇನ್ ಚಲಿಸಿದ ಕಾರಣ ಆಕೆ ಸ್ಥಳದಲ್ಲೇ ಮೃತಪಟ್ಟಳು. ಈ ಭೀಕರ ಅಪಘಾತದ ದೃಶ್ಯ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕ್ರೇನ್ ಮಾಲೀಕ ಪೆರಿಯಸ್ವಾಮಿ ವಿರುದ್ಧ ಯುವತಿ ತಂದೆ ರೆಹಮಾನ್ ಖಾನ್ ವೈಟ್ ಫೀಲ್ಡ್ ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು