ಮಹಾ ನಗರಪಾಲಿಕೆ ಸದಸ್ಯ ಜೆ.ಗೋಪಿ ಅವರ ಸಮಾಜ ಸೇವೆ ಅನುಕರಣೀಯ : ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಶ್ಲಾಘನೆ

ಮೈಸೂರು : ಮಹಾ ನಗರಪಾಲಿಕೆ ಸದಸ್ಯ ಜೆ.ಗೋಪಿ ಅವರ ಸಮಾಜ ಸೇವೆ ಅನುಕರಣೀಯ ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ನಗರದ 43ನೇ ವಾರ್ಡಿನ ಟಿ.ಕೆ.ಲೇಔಟ್ ಗಣೇಶ್ ಭಂಡಾರ್ ವೃತ್ತದಲ್ಲಿ ಪಾಲಿಕೆ ಸದಸ್ಯ ಜೆ.ಗೋಪಿ ನೇತೃತ್ವದಲ್ಲಿ ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್ ಸ್ಮರಣಾರ್ಥ ಸುಯೋಗ್ ಆಸ್ಪತ್ರೆಯ ಸಹಯೋಗದೊಂದಿಗೆ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಶಿಬಿರದಲ್ಲಿ ವೈದ್ಯಕೀಯ ಶಾಸ್ತ್ರ, ಸಕ್ಕರೆ ಕಾಯಿಲೆ, ಶ್ವಾಸಕೋಶ, ನರ ವಿಜ್ಞಾನ, ಮೂಳೆ-ಕೀಲು, ಹೃದಯ, ಕ್ಯಾನ್ಸರ್, ದಂತ, ಕಿವಿ, ಮೂಗು ಮತ್ತು ಗಂಟಲು, ಮೂತ್ರ ಜನಕಾಂಗ, ನೇತ್ರ ತಪಾಸಣೆ ಸೇರಿದಂತೆ ಹಲವು ರೋಗಗಳನ್ನು ಹೆಸರಾಂತ ವೈದ್ಯರು ತಪಾಸಣೆ ನಡೆಸುತ್ತಿದ್ದಾರೆ. ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾಂಗ್ರೆಸ್ ಮುಖಂಡ ಕೆ.ಹರೀಶ್ ಗೌಡ ಮಾತನಾಡಿ, ಪಾಲಿಕೆ ಸದಸ್ಯ ಜೆ.ಗೋಪಿ ಅವರು ಇದೊಂದು ಅತ್ಯುತ್ತಮವಾದ ಆರೋಗ್ಯ ತಪಾಸಣಾ ಶಿಬಿರ ರೂಪಿಸಿದ್ದಾರೆ. ಹೆಸರಾಂತ ವೈದ್ಯರು ಆಗಮಿಸಿದ್ದಾರೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ನೂರಕ್ಕೂ ಹೆಚ್ಚು ವೃದ್ಧರು, ಅಂಗವಿಕಲರು ಮತ್ತು ವಿಧವೆಯರು ಸೇರಿದಂತೆ ವಿವಿಧ ಫಲಾನುಭವಿಗಳಿಗೆ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳ ಆದೇಶ ಪತ್ರವನ್ನು ವಿತರಿಸಲಾಯಿತು.
ಜತೆಗೆ ನೂರಾರು ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಈ ವೇಳೆ ರೋಗಿಗಳಿಗೆ ಹಣ್ಣು ಮತ್ತು ಔಷಧಿ ನೀಡಲಾಯಿತು.
ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಮಾಜಿ ಮೇಯರ್ ಪುಷ್ಪಲತಾ ಟಿ.ಬಿ.ಚಿಕ್ಕಣ್ಣ, ಡಾ.ಯೋಗಣ್ಣ, ಮಹಾನಗರಪಾಲಿಕೆ ಸದಸ್ಯ ಜೆ.ಗೋಪಿ ಸೇರಿದಂತೆ ಹಲವರು ಇದ್ದರು.

ಚಾಮುಂಡೇಶ್ವರಿಯಿಂದ ಸ್ಪರ್ಧಿಸುವ ಪ್ರಸ್ತಾಪ ಇಲ್ಲ

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಯಾ ವುದೇ ಪ್ರಸ್ತಾಪ ಇಲ್ಲ ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು. ಮೈಸೂರಿನಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಅವರು ಮಾತನಾ ಡಿ, ಒಂದು ವೇಳೆ ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರದಿಂದಲೇ ಸ್ಪರ್ಧೆ ಮಾಡಿದರೆ, ತಾವು ಎಲ್ಲಿಯೂ ಸ್ಪರ್ಧೆ ಮಾಡದೆ ಕೇವಲ ಅವರ ಪ್ರಚಾರಕ್ಕೆ ಮಾತ್ರ ಸೀಮಿತರಾಗಿರುವುದಾಗಿ ಹೇಳಿದರು.



 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು