ಟನ್ ಕಬ್ಬಿಗೆ 4500, ಲೀಟರ್ ಹಾಲಿಗೆ 40 ರೂ ರೈತರ ಬೇಡಿಕೆ ಸಮಂಜಸ
-ಅಂತನಹಳ್ಳಿ ಬಾಲಕೃಷ್ಣ, ಮಂಡ್ಯ
ಮಂಡ್ಯ : ಕಬ್ಬಿಗೆ ವೈಜ್ಞಾನಿಕ ಬೆಲೆ ನೀಡುವಂತೆ ಆಗ್ರಹಿಸಿ ಕಳೆದ 23 ದಿನಗಳಿಂದ ಸರ್ಕಾರದ ವಿರುದ್ದ ರೈತರು ನಡೆಸುತ್ತಿರುವ ಧರಣಿಗೆ ಆದಿ ಚುಂಚನಗಿರಿ ಮಠದ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಬೆಂಬಲ ಸೂಚಿಸಿ ಕೆಲಕಾಲ ಧರಣಿ ನಿರತ ರೈತರೊಂದಿಗೆ ಮಾತನಾಡಿ ಸರ್ಕಾರವನ್ನು ಒತ್ತಾಯಿಸುವುದಾಗಿ ಭರವಸೆ ನೀಡಿದರು.
ನಂತರ ಅವರು ಮಾತನಾಡಿ, ರೈತರು ದೇಶದ ಬೆನ್ನೆಲುಬು. ಸರ್ಕಾರ ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಕೊಡದಿದ್ದರೆ ರೈತರು ಅನೇಕ ಸಂಕಷ್ಟಗಳನ್ನ ಎದುರಿಸಬೇಕಾಗುತ್ತದೆ. ಈಗಿನ ಸಂದರ್ಭದಲ್ಲಿ ಬೇಸಾಯಕ್ಕೆ ಬೇಕಾಗುವ ಗೊಬ್ಬರ, ಕೂಲಿ ಸೇರಿದಂತೆ ಎಲ್ಲಾ ವಸ್ತುಗಳ ಬೆಲೆ ಗಗನಕ್ಕೆರಿವೆ. ಹೀಗಿರುವಾಗ ರೈತರು ಬೆಳೆದ ಬೆಳೆಗೂ ಸೂಕ್ತ ಬೆಲೆ ನಿಗದಿ ಮಾಡಬೇಕು ಎಂದರು.
ರೈತರೂ ಕೂಡ ಬೇಸಾಯಕ್ಕೆ ಸಂಬಂದಿಸಿದಂತೆ ಹೊಸ, ಹೊಸ ತಂತ್ರಾಜ್ಞಾನ ಅಳವಡಿಸಿಕೊಳ್ಳಬೇಕು ಅಲ್ಲದೇ ಸರ್ಕಾರ ರೈತರಿಗೆ ಅಗತ್ಯ ತರಬೇತಿಯನ್ನೂ ನೀಡಬೇಕು. ಟನ್ ಕಬ್ಬಿಗೆ 4500 ರೂ ಹಾಗೂ ಲೀಟರ್ ಹಾಲಿಗೆ 40 ರೂ ಹೆಚ್ಚಿಸುವಂತೆ ರೈತರು ಧರಣಿ ಮೂಲಕ ಒತ್ತಾಯಿಸುತ್ತಿರುವುದು ಸಮಂಜಸವಾಗಿದೆ. ಕೂಡಲೇ ಸರ್ಕಾರ ಅವರ ಬೇಡಿಕೆಗಳನ್ನ ಈಡೇರಿಸಬೇಕೆಂದು ಒತ್ತಾಯಿಸಿದರು.
ಈಗಾಗಲೆ ಮುಖ್ಯಮಂತ್ರಿಗಳು ರೈತರ ಬೇಡಿಕೆಗಳನ್ನ ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ. ಆದ್ದರಿಂದ ಮುಖ್ಯಮಂತ್ರಿಗಳು ಹೇಳಿರುವ ಪ್ರಕಾರ ಒಂದೆರಡು ದಿನ ಕಾದುನೋಡೊಣ ಎಂದರು. ಈ ವೇಳೆ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ ಇದ್ದರು.
0 ಕಾಮೆಂಟ್‌ಗಳು