ಕಾವೇರಿ ಹೋರಾಟಗಾರನಿಗೆ ಸಂದ ರಾಜ್ಯೋತ್ಸವ ಪ್ರಶಸ್ತಿ ಗಣ್ಯರಿಂದ ಅಭಿನಂದನೆಗಳ ಮಹಾಪೂರ

 ಪಾಂಡವಪುರ : ಕಾವೇರಿ ನೀರು ರಕ್ಷಣೆಗಾಗಿ ತಾಲ್ಲೂಕಿನಲ್ಲಿ ನಡೆದ ಹಲವಾರು ಹೋರಾಟಗಳ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದ ಕನ್ನಡಪರ ಹೋರಾಟಗಾದ ವಿಷ್ಣು ವಿಠಲ ಅವರಿಗೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯೋತ್ಸವ ಪ್ರಶಸ್ತಿ ಘೋಷಿಸಿದೆ. 

ಮೂಲತಃ ಒಬ್ಬ ಆಟೋ ಚಾಲಕರಾಗಿರುವ ತಾಲ್ಲೂಕಿನ ಹಿರೇಮರಳಿ ಗ್ರಾಮದ ವಿಠಲ ನಟ ವಿಷ್ಣುವರ್ಧನ್ ಅವರ ಕಟ್ಟಾ ಅಭಿಮಾನಿಯಾಗಿದ್ದು, ತಮ್ಮ ಹೆಸರ ಮುಂದೆ ವಿಷ್ಣು ಹೆಸರು ಸೇರಿಸಿಕೊಂಡು ಇಂದು ವಿಷ್ಣು ವಿಠಲ ಎಂದೇ ಈ ಭಾಗದಲ್ಲಿ ಖ್ಯಾತರಾಗಿದ್ದಾರೆ.

ವಿಷ್ಣು ಸೇನಾ ಸಮಿತಿ ಜಿಲ್ಲಾಧ್ಯಕ್ಷರಾಗಿ ಅದರ ಆಶ್ರಯದಲ್ಲಿ ಆಟೋ ಚಾಲಕರ ಸಂಘಟನೆ, ಅವರ ಕ್ಷೇಮಾಭಿವೃದ್ಧಿಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಸೇರಿದಂತೆ ಪ್ರತಿ ವರ್ಷ ಹಿರೇಮರಳಿ ಆಟೋ ಸರ್ಕಲ್ ನಲ್ಲಿ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಿ ತಾಲ್ಲೂಕಿನ ವಿವಿಧ ಗಣ್ಯರನ್ನು, ಹೋರಾಟಗಾರರನ್ನು ಸನ್ಮಾನಿಸುತ್ತಾ ತಾಲ್ಲೂಕಿನ ಜನತೆ ಗಮನ ಸೆಳೆದಿದ್ದ ವಿಷ್ಣು ವಿಠಲ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತು ಗುರುತಿಸಿ ಗೌರವಿಸುತ್ತಿರುವುದಕ್ಕೆ ತಾಲ್ಲೂಕಿನ ಅನೇಕ ಗಣ್ಯರು ಸಂತಸ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

ಕರೋನಾ ಸಂದರ್ಭದಲ್ಲಿ ವಿಷ್ಣು ವಿಠಲ ತಮ್ಮ ಸ್ವಂತ ಹಣದಲ್ಲಿ ಅನೇಕ ನಿರ್ಗತಿಕರು, ದಾರಿಹೋಕರು, ಬೀದಿ ಬದಿಯ ತರಕಾರಿ ವ್ಯಾಪಾರಿಗಳಿಗೆ, ಕರೋನ ಸಂಕಷ್ಟದಲ್ಲಿ ಕೆಲಸ ಮಾಡುತ್ತಿದ್ದ ಪೊಲೀಸರು, ಪತ್ರಕರ್ತರು, ಆರೋಗ್ಯ ಇಲಾಖೆ ಸಿಬ್ಬಂದಿಗಳು ಮತ್ತು ಪತ್ರಕರ್ತರಿಗೆ ಮದ್ಯಾಹ್ನದ ಊಟವನ್ನು ಒದಗಿಸುತ್ತಿದ್ದರು.

ಇವರ ಎಲ್ಲಾ ಸಾಮಾಜಿಕ ಸೇವೆಯನ್ನು ಗುರುತಿಸಿದ ಕನ್ನಡ ಸಾಹಿತ್ಯ ಪರಿಷತ್ತು ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನಿಡುತ್ತಿದ್ದು, ಸಂಜೆ ಕಸಾಪ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶಾಸಕ ಸಿ.ಎಸ್.ಪುಟ್ಟರಾಜು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು