ಕೌದಳ್ಳಿ ಗ್ರಾಮದಲ್ಲಿ ಹಗಲಲ್ಲೂ ಉರಿಯುವ ಬೀದಿ ದೀಪಗಳು : ಪಂಚಾಯ್ತಿ ನಿರ್ಲಕ್ಷ್ಯ, ಸಾರ್ವಜನಿಕರ ಆಕ್ರೋಶ
ನವೆಂಬರ್ 02, 2022
ಹಗಲಲ್ಲಿ ಉರಿಯುವ ವಿದ್ಯುತ್ ವೆಚ್ಚವನ್ನು ಪಂಚಾಯ್ತಿ ಅಧಿಕಾರಿಗಳು ಭರಿಸುವಂತೆ ನ್ಯಾಯಾಲಯದಲ್ಲಿ ಮೊಕದ್ದಮೆ ಎಚ್ಚರಿಕೆ
ವರದಿ-ಶಾರುಕ್ ಖಾನ್, ಹನೂರು
ಹನೂರು : ತಾಲೂಕಿನ ಕೌದಳ್ಳಿ ಗ್ರಾಮದಲ್ಲಿ ಪಂಚಾಯ್ತಿ ನಿರ್ಲಕ್ಷ್ಯದಿಂದ ಬೀದಿ ದೀಪಗಳು ಹಗಲಲ್ಲೂ ಉರಿಯುತ್ತಿವೆ. ಬೆಳಗಿನ ಜಾವ ಬೀದಿ ದೀಪಗಳನ್ನು ಆರಿಸಬೇಕಾದ ಪಂಚಾಯ್ತಿ ಸಿಬ್ಬಂದಿಗಳ ಉದಾಸೀನತೆಯಿಂದ ಅಮೂಲ್ಯವಾದ ವಿದ್ಯುತ್ ಅನಾವಶ್ಯಕವಾಗಿ ಬಳಕೆಯಾಗುತ್ತಿದೆ.
ಈ ಬಗ್ಗೆ ಕೌದಳ್ಳಿ ಗ್ರಾಮದ ವಕೀಲ ಎಂ.ನಂದಕುಮಾರ್ ಮಾತನಾಡಿ, ನಾನು ಗ್ರಾಮ ಪಂಚಾಯಿತಿಗೆ ಹಲವಾರು ಬಾರಿ ದೂರು ಕೊಟ್ಟಿದ್ದರೂ ಪಂಚಾಯ್ತಿ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ನಂತರ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿ ಮತ್ತು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರಿಗೂ ಲಿಖಿತವಾಗಿ ದೂರು ನೀಡಿದ್ದೇನೆ ಎಂದರು.
ಕೆಲವು ಗ್ರಾಮಗಳಲ್ಲಿ ಬೀದಿ ದೀಪಗಳೇ ಇರುವುದಿಲ್ಲ. ನಮ್ಮ ಗ್ರಾಮದಲ್ಲಿ ಇದ್ದರೂ ಈ ರೀತಿ ದುರ್ಬಳಕೆಯಾಗುತ್ತಿದೆ. ಕೂಡಲೇ ಪಂಚಾಯ್ತಿ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೇ,
ಪ್ರತಿನಿತ್ಯ ಗ್ರಾಮದಲ್ಲಿ ಪಂಚಾಯ್ತಿ ನಿರ್ಲಕ್ಷ್ಯದಿಂದ ಹಗಲಲ್ಲಿ ಉರಿಯುವ ಬೀದಿ ದೀಪಗಳ ಸಂಖ್ಯೆ, ಅವುಗಳ ವೆಚ್ಚ ಮುಂತಾದವುಗಳನ್ನು ವಿದ್ಯುತ್ ಇಲಾಖೆ ಅಧಿಕಾರಿಗಳಿಂದ ಲೆಕ್ಕ ಹಾಕಿಸಿ ಆ ಹೆಚ್ಚುವರಿ ಹಣವನ್ನು ಪಂಚಾಯ್ತಿ ಅಧಿಕಾರಿಯಿಂದ ವಸೂಲಿ ಮಾಡುವಂತೆ ನ್ಯಾಯಾಲಯದಲ್ಲಿ ಮೊಕದ್ದಮೆ ಮೂಡಲಾಗುವುದು ಎಂದು ವಕೀಲ ನಂದಕುಮಾರ್ ಎಚ್ಚರಿಕೆ ನೀಡಿದ್ದಾರೆ.
0 ಕಾಮೆಂಟ್‌ಗಳು