ಪಾಂಡವಪುರ ಬಿಜೆಪಿ ಕಚೇರಿಯಲ್ಲಿ ಸಂವಿಧಾನ ದಿನ ಆಚರಣೆ : ಗ್ರಾಪಂ ಅಧ್ಯಕ್ಷೆಗೆ ಸನ್ಮಾನ

ಪಾಂಡವಪುರ : ಸಂವಿಧಾನ ದಿನದ ಪ್ರಯುಕ್ತ ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಭಾನುವಾರ ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ತಾಲ್ಲೂಕಿನ ಹಿರೇಮರಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಜಯಲಕ್ಷ್ಮಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಅಶೋಕ್, ಪರಿವರ್ತನಾ ಟ್ರಸ್ಟ್ ಅಧ್ಯಕ್ಷ ಹಾಗೂ ಮುಖಂಡರಾದ ಡಾ.ಎನ್.ಎಸ್.ಇಂದ್ರೇಶ್, ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಮಲ್ಲೇಶ್, ಗೃಹ ನಿರ್ಮಾಣ ಸಹಕಾರ ಸಂಘದ ನಿರ್ದೇಶಕ ಭಾಸ್ಕರ್, ಪುರಸಭಾ ನಾಮಿನಿ ಸದಸ್ಯರಾದ ರಾಮಲಿಂಗಂ, ಬಿಜೆಪಿ ನಗರ ಅಧ್ಯಕ್ಷ ಶ್ರೀನಿವಾಸ್ ನಾಯಕ್, ಮುಖಂಡರಾದ ಪುಟ್ಟರಾಜು, ತಮ್ಮಣ್ಣ, ರಾಜು, ನವೀನ್, ಮಲ್ಲಿಕ್, ಅರಳಗುಪ್ಪೆ ಕುಮಾರ್, ಕಲಾವಿದರಾದ ಶಂಭುನಹಳ್ಳಿ ಮಂಜುನಾಥ್ ಮುಂತಾದವರು ಇದ್ದರು.