500 ಚಿತ್ರಗಳಲ್ಲಿ ನಟಿಸಿದ್ದ ಕನ್ನಡದ ಹೆಸರಾಂತ ಪೋಷಕ ನಟ ಲೋಹಿತಾಶ್ವ ನಿಧನ

 ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಲೋಹಿತಾಶ್ವ(80) ಅವರು ಅನಾರೋಗ್ಯದಿಂದ ಇಂದು ನಿಧನರಾದರು.
ಇತ್ತೀಚೆಗೆ ಹೃದಯಾಘಾತದಿಂದಾಗಿ ಆಸ್ಪತ್ರೆಗೆ ಸೇರಿದ್ದ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿತ್ತು ಎಂದು ಅವರ ಕುಟುಂಬದ ಆಪ್ತರು ಇತ್ತೀಚೆಗμÉ್ಟ ಮಾಹಿತಿ ಹಂಚಿಕೊಂಡಿದ್ದರು. ಆದರೆ, ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಅವರು ನಿಧನರಾಗಿದ್ದಾರೆ.
80 ವರ್ಷದ ಲೋಹಿತಾಶ್ವ ಅವರಿಗೆ ಅಕ್ಟೋಬರ್ 9ರ ರಾತ್ರಿ ಹೃದಯಾಘಾತವಾಗಿತ್ತು. ಕುಟುಂಬಸ್ಥರು ಕೂಡಲೇ ಅವರನ್ನು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‍ನಲ್ಲಿರುವ ಸಾಗರ್ ಅಪೋಲೋ ಆಸ್ಪತ್ರೆಗೆ ದಾಖಲಿಸಿದ್ದರು. ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ ಕಂಡುಬಂದಿತ್ತು. ಆದರೆ ಇದೀಗ ಅವರು ನಿಧನರಾಗಿರುವುದಾಗಿ ವರದಿಯಾಗಿದೆ.
ʼಅಭಿಮನ್ಯುʼ, ʼಎ ಕೆ 47ʼ, 'ಅವತಾರ ಪುರುಷ', 'ಚಿನ್ನ', 'ಸ್ನೇಹಲೋಕ', 'ಸಿಂಹದ ಮರಿ', 'ಸಾಂಗ್ಲಿಯಾನ', 'ಟೈಮ್ ಬಾಂಬ್', 'ಲಾಕಪ್ ಡೆತ್', 'ರಣಚಂಡಿ', 'ಸಂಗ್ರಾಮ' ಸೇರಿದಂತೆ ಕನ್ನಡದ 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಲೋಹಿತಾಶ್ವ, 'ಮಾಲ್ಗುಡಿ ಡೇಸ್', 'ಗೃಹಭಂಗ', 'ಆಂಟಿಮ್ ರಾಜ್' ಮುಂತಾದ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲೂ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು