1.40 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ಎಲ್.ನಾಗೇಂದ್ರ ಚಾಲನೆ

ಮೈಸೂರು : ನಗರದ ವಾರ್ಡ್ ಸಂಖ್ಯೆ, 40 ಮತ್ತು 41 ರಲ್ಲಿ 1.40 ಕೋಟಿ ರೂ. ವೆಚ್ಚದಲ್ಲಿ ವಿವಿಧ ರಸ್ತೆಗಳ ಡಾಂಬರೀಕರಣ ಕಾಮಗಾರಿಗೆ ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಗುರುವಾರ ಬೆಳಿಗ್ಗೆ ಚಾಲನೆ ನೀಡಿದರು.
ಲೋಕೋಪಯೋಗಿ ಇಲಾಖೆಯ 5054 ಲೆಕ್ಕ ಶೀರ್ಷಿಕೆಯ ಅನುದಾನದಲ್ಲಿ ನಗರದ ಹೃದಯ ಭಾಗದಲ್ಲಿರುವ ಪ್ರಭಾ ಟಾಕೀಸ್ ವೃತ್ತದಿಂದ ಇರ್ವಿನ್ ರಸ್ತೆಯ ವರೆಗೆ ಹಾಗೂ ಪಕ್ಕದ ಇಂಡಸ್ಟ್ರೀಸ್ ಶಾಲೆಯ ರಸ್ತೆಗೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಲಾಯಿತು.

ರೋಗಿಯೊಬ್ಬರ ವೈದ್ಯಕೀಯ ಚಿಕಿತ್ಸೆಗೆ ಸ್ಥಳದಲ್ಲೇ ನೆರವು ನೀಡಿದ ಶಾಸಕ ಎಲ್.ನಾಗೇಂದ್ರ

ಇದೇ ಸಂದರ್ಭದಲ್ಲಿ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆಗೆ ಹಣವಿಲ್ಲದೆ ಸಂಕಷ್ಟದಲ್ಲಿದ್ದ ವ್ಯಕ್ತಿಯೊಬ್ಬರಿಗೆ ಶಾಸಕ ನಾಗೇಂದ್ರ ವೈಯುಕ್ತಿಕವಾಗಿ ನೆರವು ನೀಡಿದರಲ್ಲದೇ, ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದಲೂ ಚಿಕಿತ್ಸಾ ವೆಚ್ಚಕ್ಕೆ ನೆರವು ಕೊಡಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮೈಸೂರು ಮಹಾನಗರಪಾಲಿಕೆ ಸದಸ್ಯರುಗಳಾದ ಸತೀಶ್ ಹಾಗೂ ಎಂ.ಡಿ.ನಾಗರಾಜು,  
ಚಾಮರಾಜ ಕ್ಷೇತ್ರದ ಭಾ.ಜ.ಪ ಅಧ್ಯಕ್ಷ ಸೋಮಶೇಖರರಾಜು, ವಾರ್ಡ್ ಅಧ್ಯಕ್ಷರಾದ ಅರವಿಂದ, ಆರಾಧನಾ ಸಮಿತಿ ಸದಸ್ಯ ಜೆ.ಸಿ.ಬಿ ರವಿ, ಆಶ್ರಯ ಸಮಿತಿ ಸದಸ್ಯ ಅನೂಜ್ ಸಾರಸ್ವತ್, ಪನ್ನಾಲಾಲ್, ಗೈಡ್ ಬಾಬು, ರಾಮ, ಪಾಪ, ಗಂಗಣ್ಣ, ಸ್ವಪ್ನ ಶೇಖರ್, ಗಣೇಶ, ಕೇಬಲ್ ವಿಜಿ, ಚಲುವರಾಜು, ಪಂಕಜ್ ಪಾರೀಕ್, ರಾಜು, ಕೊಳಸಂದಿಬೀದಿ ಕುಮಾರ, ಶಾಂತಿ, ಪ್ರಶಾಂತ್ ಮುಂತಾದವರು ಹಾಜರಿದ್ದರು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು