ಭಾರಿ ಮಳೆಗೆ ಮರ ಬೀಳುವ ಭೀತಿ : ತೆರವಿಗೆ ಒತ್ತಾಯ

ಆತಂಕದಲ್ಲಿ ಸಾರ್ವಜನಿಕರು

ವರದಿ-ಶಾರುಕ್ ಖಾನ್, ಹನೂರು

ಹನೂರು : ಪಟ್ಟಣದ ಬಂಡಳ್ಳಿ ಮುಖ್ಯರಸ್ತೆಯಲ್ಲಿರುವ ದೊಡ್ಡ ಗಾತ್ರದ ಮರವೊಂದು ಸತತವಾಗಿ ಬೀಳುತ್ತಿರುವ ಮಳೆಯಿಂದ ಬೀಳುವ ಭೀತಿ ಎದುರಾಗಿದ್ದು, ಯಾವುದೇ ಪ್ರಾಣಾಪಾಯಕ್ಕೂ ಮುನ್ನ ಮರವನ್ನು ತೆರವುಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಇಲ್ಲಿನ ಅಮ್ಮಾನ್ ಮೆಡಿಕಲ್ ಮುಂಭಾಗದಲ್ಲಿರುವ ಈ ಬೃಹತ್ ಗಾತ್ರದ ಮರವು ಈಗಾಗಲೇ ಮಳಿಗೆ ರಸ್ತೆಯತ್ತ ವಾಲಿದೆ. ಕೆಲವು ಕಟ್ಟಡಗಳು ಮರ ಕೆಳಗೆ ಬೀಳುವುದನ್ನು ತಡೆದಿವೆ.

ಬಂಡಳ್ಳಿ, ಶಾಗ್ಯ, ಹಲಗಪುರ, ಚಂಗವಾಡಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಈ ಪ್ರಮುಖ ರಸ್ತೆಯಲ್ಲಿ ಕ್ರಿಸ್ತರಾಜ ವಿದ್ಯಾ ಸಂಸ್ಥೆ. ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾ ಹಾಗೂ ಖಾಸಗಿ ಆಸ್ಪತ್ರೆಗೆ ಹೋಗುವ ನೂರಾರು ಜನರು, ವಿದ್ಯಾರ್ಥಿಗಳು ಮರ ಬೀಳುವ ಆತಂಕದಲ್ಲಿದ್ದಾರೆ.

ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಯಾವುದೇ ಪ್ರಯೋಜನವಾಗಿಲ್ಲವೆಂದು ಅಂಗಡಿ ಮಾಲೀಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ, ಆದಷ್ಟು ಬೇಗ ಅಧಿಕಾರಿಗಳು ಈ ಮರವನ್ನು ತೆರವುಗೊಳಿಸಿ ಸಾರ್ವಜನಿಕರ ಆತಂಕ ದೂರ ಮಾಡಬೇಕೆಂದು ಇಲ್ಲಿನ ಅಲ್ಲಿನ ಅಂಗಡಿ ಮಾಲೀಕರು ಒತ್ತಾಯಿಸಿದ್ದಾರೆ.

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು