ಬಿಜೆಪಿ ಮುಖಂಡ ಎಸ್.ಪಿ. ಸ್ವಾಮಿ ನೇತೃತ್ವ 
ವರದಿ - ಟಿ.ಬಿ.ಸಂತೋಷ, ಮದ್ದೂರು ಮದ್ದೂರು : ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲ್ಲೂಕಿನ ಅಂಬಿಗರಹಳ್ಳಿಯ ತ್ರಿವೇಣಿ ಸಂಗಮದಲ್ಲಿ ಆಕ್ಟೋಬರ್ 13 ರಿಂದ 16 ರ ತನಕ ಜರುಗಲಿರುವ ಮಹಾ ಕುಂಭಮೇಳ ಹಿನ್ನೆಲೆಯಲ್ಲಿ ಮಲೇ ಮಹದೇಶ್ವರ ಸ್ವಾಮಿ ಬೆಟ್ಟದಿಂದ ಅಗಮಸಿರುವ ಮಹದೇಶ್ವರ ಜ್ಯೋತಿ ರಥ ಯಾತ್ರೆಗೆ ಮದ್ದೂರು ತಾಲೂಕಿನ ಹನುಮಂತನಗರದ ಆತ್ಮಲಿಂಗೆಶ್ವರ ದೇವಸ್ಥಾನದ ಮುಂಭಾಗ ಬಿಜೆಪಿ ಮುಖಂಡ ಹಾಗೂ ಮನ್ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ, ರಥ ಯಾತ್ರೆಗೆ ಪೂಜೆ ಸಲ್ಲಿಸಿ ಭವ್ಯವಾಗಿ ಸ್ವಾಗತಿಸಿದರು.
ನಂತರ ಮಾತನಾಡಿದ ಅವರು, ಲಕ್ಷ್ಮಣ ತೀರ್ಥ, ಹೇಮಾವತಿ, ಕಾವೇರಿ ನದಿಗಳು ಸೇರುವ ತ್ರಿವೇಣಿ ಸಂಗಮಕ್ಕೆ ಮಹದೇಶ್ವರ ಸ್ವಾಮಿಯವರು ಬಂದು ಹೋಗಿದ್ದರು ಎಂಬ ಪ್ರತೀತಿ ಇದೆ. ಈ ನಿಟ್ಟಿನಲ್ಲಿ ಮಲೇ ಮಹದೇಶ್ವರ ಬೆಟ್ಟದಿಂದ ಹೊರಟಿರುವ ಜ್ಯೋತಿ ರಥಯಾತ್ರೆಯೂ ಮದ್ದೂರು ತಾಲೋಕಿನ ಪ್ರತಿ ಗ್ರಾಮಗಳಲ್ಲಿಯೂ ಸಂಚರಿಸುವ ಮೂಲಕ ಮಂಡ್ಯ ಜಿಲ್ಲೆಗೆ ಜನತೆಗೆ ಸುಖ, ಶಾಂತಿ ನೆಮ್ಮದಿ, ನೆಲೆಸುವ ಉದ್ದೇಶದಿಂದ ಜ್ಯೋತಿ ರಥಯಾತ್ರೆ ಸಂಚರಿಸುತ್ತದೆ ಎಂದರು.
ನಂತರ ಮಹದೇಶ್ವರ ಜ್ಯೋತಿ ರಥ ಯಾತ್ರೆಯು ಕೆ.ಎಂ.ದೊಡ್ಡಿಯ ಮುಖ್ಯ ರಸ್ತೆಯಲ್ಲಿ ಸಂಚರಿಸಿತು. ಗ್ರಾಮ ಪಂಚಾಯತಿಯ ಸದಸ್ಯರು ಹಾಗೂ ಸಿಬ್ಬಂದಿಯವರು ರಥ ಯಾತ್ರೆಗೆ ಪೂಜೆ ಸಲ್ಲಿಸುದರ ಮೂಲಕ ರಥ ಯಾತ್ರೆಯನ್ನ ಸ್ವಾಗತಿಸಿದರು.
ಮದ್ದೂರು ತಹಸೀಲ್ದಾರ್ ನರಸಿಂಹ ಮೂರ್ತಿ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಪಣ್ಣೆದೊಡ್ಡಿ ರಘು, ಮುಖಂಡ ಕರಡಕೆರೆ ಹನುಮಂತೇಗೌಡ, ಹಾಗಲಹಳ್ಳಿ ರಘು, ಪಿಡಿಓ ಸುಧಾ, ಮುಂತಾದವರು ಉಪಸ್ಥಿತರಿದ್ದರು.
0 ಕಾಮೆಂಟ್‌ಗಳು