ನಂಜನಗೂಡಿನಲ್ಲಿ ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ : ಹರ್ಷವರ್ಧನ್

ಸಂಘ, ಸಂಸ್ಥೆಗಳು ಸಹಕಾರ ನೀಡಲು ಮನವಿ 

ವರದಿ-ಹೆಚ್.ಎಸ್.ಚಂದ್ರ, ನಂಜನಗೂಡು

ನಂಜನಗೂಡು : ಪಟ್ಟಣದಲ್ಲಿ ನವೆಂಬರ್ 1 ರಂದು ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಿಸಲು ಎಲ್ಲಾ ರೀತಿಯ ಸಿದ್ಧತೆ ನಡೆಸಲಾಗಿದೆ ಎಂದು ಶಾಸಕ ಹರ್ಷವರ್ಧನ್ ತಿಳಿಸಿದರು.
ಮಿನಿ ವಿಧಾನಸೌಧ ಸಭಾಂಗಣದಲ್ಲಿ ನಡೆದ ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ಇದೇ 28 ರಂದು ದೇವಾಲಯದ ಮುಂಭಾಗ ಸರ್ಕಾರದ ವತಿಯಿಂದ ಗಾಯನ ಕಾರ್ಯಕ್ರಮ ನಡೆಯಲಿದೆ ಅದಕ್ಕೂ ಸಿದ್ಧತೆ ನಡೆಸಿದ್ದೇವೆ. ರಾಜ್ಯೋತ್ಸವ ಆಚರಣೆ ಕುರಿತು ಎಲ್ಲ ಸಂಘ ಸಂಸ್ಥೆಗಳ ಸಲಹೆ ಪಡೆಯಲಾಗಿದೆ. ಅವರ ಸಹಕಾರದೊಂದಿಗೆ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಲಾಗುವುದು ಎಂದರು.

ತಹಸಿಲ್ದಾರ್ ಶಿವಮೂರ್ತಿ, ವಿವಿಧ ಸಂಘಟನೆಯ ಮುಖಂಡರಾದ ಶಿವಶಂಕರ್, ಮಲ್ಲಹಳ್ಳಿ ನಾರಾಯಣ, ಟಿ.ವಿದ್ಯಾಸಾಗರ್, ವಿಜಯ್ ಕುಮಾರ್ ಇನ್ನಿತರರು ಇದ್ದರು.


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು