ಹೋಟೆಲ್ ಮಹಾರಾಜ ಮೇಲೆ ದಾಳಿ
ಮೈಸೂರು : ನಗರದ ಸಿಸಿಬಿ ಘಟಕದ ಹೆಚ್ ಮತ್ತು ಬಿ ವಿಭಾಗದ ಪೊಲೀಸರು ಅ.18 ರಂದು ಲಕ್ಷ್ಮೀಪುರಂ ಠಾಣಾ ವ್ಯಾಪ್ತಿಯ ಚಾಮರಾಜ ಮೊಹಲ್ಲದ ಜೆಎಲ್‍ಬಿ ರಸ್ತೆಯಲ್ಲಿರುವ ಹೋಟೆಲ್ ಮಹಾರಾಜದ ಕೊಠಡಿ ಸಂಖ್ಯೆ-314ರಲ್ಲಿ ದಾಳಿ ಮಾಡಿ ಕಾನೂನು ಬಾಹಿರವಾಗಿ ಹಣವನ್ನು ಪಣವನ್ನಾಗಿಟ್ಟು ಅಂದರ್ ಬಾಹರ್ ಇಸ್ವೀಟ್ ಜೂಜಾಟ ಆಡುತ್ತಿದ್ದ 12 ಜನರನ್ನು ವಶಕ್ಕೆ ಪಡೆದು ಜೂಜಾಟದಲ್ಲಿ ಪಣವಾಗಿಟ್ಟಿದ್ದ 2,03,000 ರೂ. ನಗದು ವಶಪಡಿಸಕೊಂಡಿದ್ದಾರೆ.
ಈ ಸಂಬಂಧ ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ
ದಾಖಲಾಗಿರುತ್ತದೆ. ಡಿಸಿಪಿ ಎಂ.ಎಸ್. ಗೀತ, ಎಸಿಪಿ ಸಿ.ಕೆ. ಅಶ್ವತ್ಥನಾರಾಯಣ ಮಾರ್ಗದರ್ಶನದಲ್ಲಿ, ಹೆಚ್ ಮತ್ತು ಬಿ ವಿಭಾಗದ ಇನ್ಸ್‍ಪೆಕ್ಟರ್ ಜಿ.ಶೇಖರ್, ಸಿಬ್ಬಂದಿಗಳಾದ ಸಲೀಂಖಾನ್, ಲಕ್ಷ್ಮಿಕಾಂತ.ಪಿ.ಎನ್, ಪ್ರಕಾಶ.ಟಿ., ಚಂದ್ರಶೇಖರ, ಮಧುಸೂಧನ, ಮಹೇಶ್, ಪವನ್, ಗೋವಿಂದ ದಾಳಿಯಲ್ಲಿ ಭಾಗವಹಿಸಿದ್ದು, ದಾಳಿ ಕಾರ್ಯವನ್ನು ಮೈಸೂರು ಪೊಲೀಸ್ ಆಯುಕ್ತರಾದ ಡಾ, ಚಂದ್ರಗುಪ್ತ
ಪ್ರಶಂಸಿಸಿದ್ದಾರೆ.
0 ಕಾಮೆಂಟ್‌ಗಳು