ದಸರಾ ಪಾಸ್ ವಾಪಸ್ ಮಾಡಿದ ಶಾಸಕ ಹರ್ಷವರ್ಧನ್

ಪತ್ರಕರ್ತರಿಗೂ ಪಾಸ್ ನಿರಾಕರಣೆ : ಅಸಮಾಧಾನ

ಮೈಸೂರು : ನಾಡಹಬ್ಬ ವಿಶ್ವವಿಖ್ಯಾತ ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ಪಾಸ್ ಹಂಚಿಕೆಯಲ್ಲಿ ಗೊಂದಲ ಏರ್ಪಟ್ಟ ಕಾರಣ ಸ್ವ ಪಕ್ಷದ ಶಾಸಕ ಹರ್ಷವರ್ಧನ್ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ತಮಗೆ ನೀಡಿದ್ದ ದಸರಾ ಪಾಸ್‍ಗಳನ್ನು ವಾಪಸ್ ನೀಡಿದ್ದಾರೆ.  
ದಸರಾ ಪಾಸ್‍ಗಳೆಲ್ಲಾ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರ ಬೆಂಗಳೂರಿನ ಯಶವಂತಪುರ ಕ್ಷೇತ್ರದಲ್ಲಿ ಹಂಚಿಕೆಯಾಗಿದೆ ಎಂದು ಕಿಡಿಕಾರಿದ್ದಾರೆ. ಜಿಲ್ಲೆಯನ್ನು ಪ್ರತಿನಿಧಿಸುವ ನಮಗೆ ಕೇವಲ 75 ಪಾಸ್ ನೀಡಲಾಗಿದೆ. ಇವರ ಯಶವಂತಪುರ ಕ್ಷೇತ್ರಕ್ಕೆ ಸಾವಿರಗಟ್ಟಲೆ ಪಾಸ್ ಹಂಚಲಾಗಿದೆ. ಹಾಗಿದ್ದ ಮೇಲೆ ನಮ್ಮ ಕ್ಷೇತ್ರದ ಜನರಿಗೆ ಏನು ಉತ್ತರ ಕೊಡುವುದು ಎಂದು ಪ್ರಶ್ನಿಸಿರುವ ಶಾಸಕ ಹರ್ಷವರ್ಧನ್ ಮಂಗಳವಾರ ತಡರಾತ್ರಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ತಮಗೆ ನೀಡಿದ್ದ 75 ಪಾಸ್‍ಗಳನ್ನು ಹಿಂದುರುಗಿಸಿ ನೀವೆ ಇಟ್ಟುಕೊಳ್ಳಿ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಪತ್ರಕರ್ತರಿಗೂ ಪಾಸ್ ನಿರಾಕರಣೆ :
ಮೈಸೂರು : ನಾಡಹಬ್ಬ ಮೈಸೂರು ದಸರಾ ಕುರಿತು ಪತ್ರಿಕೆಗಳಲ್ಲಿ ವರದಿ ಮಾಡುವ ಪತ್ರಕರ್ತರಿಗೂ ಪಾಸ್ ನಿರಾಕರಿಸಲಾಗಿದೆ.
ನಗರದಲ್ಲಿ ಕಾರ್ಯನಿರತ ಪತ್ರಕರ್ತರ ಸಂಖ್ಯೆ ಹೆಚ್ಚಾಗಿದ್ದು, ಬಹುತೇಕ ಪತ್ರಕರ್ತರು ಕೆಲಸ ಮಾಡುವ ಪತ್ರಿಕೆಗಳು ಮಾಧ್ಯಮ ಪಟ್ಟಿಗೆ ಸೇರಿಲ್ಲ ಎಂಬ ಒಂದೇ ಕಾರಣವೊಡ್ಡಿ ಹಿರಿಯ ಪತ್ರಕರ್ತರಿಗೆ ಪಾಸ್ ನಿರಾಕರಿಸಲಾಗಿದೆ. 
ವಾರ್ತಾ ಮತ್ತು ಪ್ರಚಾರ ಇಲಾಖೆಯ ಕಚೇರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪಾಸ್ ಒದಗಿಸಲಾಗಿದ್ದರೂ ಅವರು ಪತ್ರಕರ್ತರಿಗೆ ನೀಡಿಲ್ಲ ಎಂದು ನೊಂದ ಪತ್ರಕರ್ತರು ದೂರಿದ್ದಾರೆ.


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು