ಕೊನೆಗೂ ಬೋನಿಗೆ ಬಿದ್ದ ನರಭಕ್ಷಕ ಚಿರತೆ : ನಿಟ್ಟುಸಿರು ಬಿಟ್ಟ ಸಾರ್ವಜನಿಕರು

ವರದಿ-ಶಾರುಕ್ ಖಾನ್, ಹನೂರು

ಹನೂರು : ಕಳೆದ ಹಲವಾರು ದಿನಗಳಿಂದ ತಾಲ್ಲೂಕಿನ ಜನರ ಆತಂಕಕ್ಕೆ ಕಾರಣವಾಗಿದ್ದ ನರಭಕ್ಷಕ ಚಿರತೆ ಕೊನೆಗೂ ಅರಣ್ಯ ಇಲಾಖೆಯ ಬೋನಿಗೆ ಬಿದ್ದಿದೆ.
ಹನೂರು ತಾಲ್ಲೂಕು ಕಾವೇರಿ ಅರಣ್ಯ ವಿಭಾಗ ಕೆಂಚನದೊಡ್ಡಿ ಗ್ರಾಮದ ಮುಖ್ಯ ರಸ್ತೆಯಿಂದ ಅರ್ಧ ಕಿಮೀ ದೂರದ ಕಾಡಿನಲ್ಲಿ ಈ ನರಭಕ್ಷಕ ಚಿರತೆ ಅರಣ್ಯ ಇಲಾಖೆಯ ಬೋನಿಗೆ ಬಿದ್ದಿದೆ.
ನರಭಕ್ಷಕ ಚಿರತೆ ಇತ್ತೀಚೆಗೆ ವ್ಯಕ್ತಿಯೊಬ್ಬರನ್ನು ಕೊಂದು ಹಾಕಿತ್ತಲ್ಲದೇ, ಹಲವಾರು ಮೇಕೆಗಳು ಮತ್ತು ಹಸುವಿನ ಮೇಲೆ ದಾಳಿ ನಡೆಸಿ ಅವುಗಳ ರಕ್ತ ಹೀರಿತ್ತು. ಇದರಿಂದ ಈ ಭಾಗದ ಜನರು ತೀವ್ರ ಆತಂಕದಲ್ಲಿದ್ದರು. ಕೆಲವೊಮ್ಮೆ ರಾತ್ರಿ ವೇಳೆ ವಾಹನ ಸವಾರರ ಕಣ್ಣಿಗೆ ಬಿದ್ದಿದ್ದ ಈ ಚಿರತೆ ಸೆರೆಗೆ ಅರಣ್ಯ ಇಲಾಖೆ ಸಿಸಿ ಕ್ಯಾಮೆರಾ ಅಳವಡಿಸಿ ಬೋನು ಇರಿಸಿದ್ದರೂ ತಪ್ಪಿಸಿಕೊಂಡಿತ್ತು. ಕ್ಯಾಮೆರಾ ಕಣ್ಣಿಗೆ ಬಿದ್ದಿರಲಿಲ್ಲ. ಸೋಮವಾರ ರಾತ್ರಿ ಅಥವಾ ಮಂಗಳವಾರ ಮುಂಜಾನೆ ಈ ನರಭಕ್ಷಕ ಚಿರತೆ ಬೋನಿಗೆ ಬಿದ್ದಿರಬಹುದು ಎನ್ನಲಾಗಿದೆ.
ಬೋನಿಗೆ ಬಿದ್ದಿರುವ ಈ ನರಭಕ್ಷಕ ಚಿರತೆಯನ್ನು ನೋಡಲು ಜನರು ಧಾವಿಸುತ್ತಿದ್ದು, ಅರಣ್ಯ ಇಲಾಕೆ ಸಿಬ್ಬಂದಿಗಳು ಜನರನ್ನು ದೂರ ಕಳಿಸಲು ಹರ ಸಾಹಸ ಪಟ್ಟರು. ಸೆರೆಯಾದ ಚಿರತೆಯನ್ನು ಜನವಸತಿ ಪ್ರದೇಶದಿಂದ ದೂರ ಇಡುವ ಕಾಡಿನಲ್ಲಿ ಬಿಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು